‘ಶುದ್ಧಿ‘ , ‘ಭಿನ್ನ ‘ ಸಿನಿಮಾಗಳನ್ನು ನಿರ್ದೇಶಿಸಿರುವ ಆದರ್ಶ್ ಈಶ್ವರಪ್ಪ ಅವರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ವಿದ್ಯಾರ್ಥಿಗಳ ಜೊತೆ ಸೇರಿ ‘ದಿ ವಾರಿಯರ್ಸ್’ ಎಂಬ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.
‘ದಿ ವಾರಿಯರ್ಸ್’ ಕಿರುಚಿತ್ರದ ವಿಶೇಷ ಎಂದರೆ ಇದು ಟೆಂಟ್ ಸಿನಿಮಾ ಅಡಿ ನಿರ್ಮಾಣವಾಗಿರುವ 50 ನೇ ಕಿರುಚಿತ್ರ. ವಿದ್ಯಾರ್ಥಿಗಳು ಕಿರುಚಿತ್ರವನ್ನು ಮಾಡಿ ಅದನ್ನು ಯೂಟ್ಯೂಬ್ನಲ್ಲಿ ಕೂಡಾ ಲಭ್ಯವಾಗುವಂತೆ ಮಾಡಿದ್ದಾರೆ. ಈ ಸಂಸ್ಥೆಯಿಂದ ಸುಮಾರು 2000 ವಿದ್ಯಾರ್ಥಿಗಳು ನಟನೆ, ಚಿತ್ರಕಥೆ, ನಿರ್ದೇಶನ, ಮಾರ್ಕೆಟಿಂಗ್, ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ಸಂಸ್ಥೆ ಬಗ್ಗೆ ಮಾತನಾಡಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಾನು ನಿರ್ದೇಶಕ ಆಗಿದ್ದು ನನ್ನ ಸ್ವಂತ ಬುದ್ಧಿಯಿಂದ, ಸಾಹಿತ್ಯದ, ಬರವಣಿಗೆಯ ಶಕ್ತಿಯಿಂದ. ಆದರೆ ಈಗಿನ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಅನುಭವ ನೀಡಲು ‘ಟೆಂಟ್ ಸಿನಿಮಾ’ ಮುಂದಾಗಿದೆ ಎಂದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡರು, ನಟ ವಸಿಷ್ಠ ಎನ್. ಸಿಂಹ ‘ದಿ ವಾರಿಯರ್ಸ್’ ಪ್ರದರ್ಶನದ ಸಮಯದಲ್ಲಿ ಹಾಜರಿದ್ದರು.
ಈ 12 ನಿಮಿಷದ ಕಿರುಚಿತ್ರ ‘ದಿ ವಾರಿಯರ್ಸ್’ನಲ್ಲಿ ಇತ್ತೀಚಿಗೆ ಧಾರವಾಡದಲ್ಲಿ ಕಟ್ಟಡ ನೆಲಸಮ ಆಗಿ ಸಾವು- ನೋವು ಸಂಭವಿಸಿತ್ತು. ಇಂತಹ ಸಂದರ್ಭಗಳಲ್ಲಿ ಈಗಿನ ಯುವಕರು ಯಾ ರೀತಿ ಸ್ಪಂದಿಸುತ್ತಾರೆ ಎಂಬುದರ ಬಗ್ಗೆ ಈ ಕಿರುಚಿತ್ರ ಚಿತ್ರೀಕರಿಸಲಾಗಿದೆ.