ತುಮಕೂರು: ನಟಿ ಯಮುನಾ ಶ್ರೀನಿಧಿ ಅವರು ರಾಜ್ಯದಲ್ಲಿ ಲಾಕ್ಡೌನ್ ಆದ ನಂತರ ಬಡವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಕಳೆದ ತಿಂಗಳು ಅವರು ರಕ್ತದಾನ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದ್ದರು. ಇದೀಗ ತುಮಕೂರು ಜಿಲ್ಲೆಯ ಹುಣಸೆಕಟ್ಟೆಯ ಬಡ ಕುಟುಂಬಗಳಿಗೆ ದಿನಸಿ ಕಿಟ್ ನೀಡಿದ್ದಾರೆ.
ಹುಣಸೆಕಟ್ಟೆಯ ಜನತೆಗೆ ದಿನಸಿ ಕಿಟ್ ವಿತರಿಸಿದ ನಟಿ ಯಮುನಾ ಶ್ರೀನಿಧಿ - distributes groceries to poor
ತಮ್ಮ ಸ್ವಂತ ಹಣದಲ್ಲಿ ಜನರಿಗೆ ರೇಶನ್ ಕಿಟ್ ವಿತರಿಸಿರುವುದನ್ನು ನೋಡಿ ಅಭಿಮಾನಿಗಳು, ಅನುಯಾಯಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯಮುನಾ ಶ್ರೀನಿಧಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ತಮ್ಮ ಹೊಸ ಸಿನಿಮಾಗಳು, ಪ್ರಾಜೆಕ್ಟಗಳ ಬಗ್ಗೆ ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಿರುತ್ತಾರೆ. ಹಿರಿತೆರೆ ಮತ್ತು ಕಿರುತೆರೆ ಎರಡರಲ್ಲೂ ಬ್ಯುಸಿ ಇರುವ ಯಮುನಾ ಶ್ರೀನಿಧಿ ಸದ್ಯ ಲಾಕ್ಡೌನ್ ಇರುವುದರಿಂದ ಜನರಿಗೆ ಸಹಾಯ ಮಾಡುವತ್ತ ಗಮನಹರಿಸಿದ್ದಾರೆ.
ಯಮುನಾ ಅವರು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ “ನನ್ನ ಫುಡ್ ಡ್ರೈವ್ ಪ್ರಯತ್ನಗಳಿಗೆ ನೀಡಿದ ಎಲ್ಲ ಬೆಂಬಲಕ್ಕಾಗಿ ಹುಣಸೇಕಟ್ಟೆ ಗ್ರಾಮದ ರೈತರಿಗೆ ಧನ್ಯವಾದಗಳು. ಆಹಾರ ಪದಾರ್ಥಗಳನ್ನು ಖರೀದಿಸಲು, ಪ್ಯಾಕಿಂಗ್ ಮಾಡಲು, ನಿಜವಾದ ಅಗತ್ಯವಿರುವವರನ್ನು ತಲುಪಲು ಮತ್ತು ವಿತರಿಸಲು ನನಗೆ ಸಹಾಯ ಮಾಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಆತಿಥ್ಯ ಮತ್ತು ಪ್ರೀತಿ ವಾತ್ಸಲ್ಯಕ್ಕೆ ನಾನು ಚಿರಋಣಿ” ಎಂದು ಬರೆದುಕೊಂಡಿದ್ದಾರೆ. ಹುಣಸೇಕಟ್ಟೆ ಗ್ರಾಮಸ್ಥರು ಕೂಡ ಇದೀಗ ಯಮುನಾ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.