ಮದುವೆ ಎನ್ನುವುದು 7 ಜನ್ಮಗಳ ನಂಟು ಎಂಬ ಮಾತಿದೆ. ಅದು ಬಡವರು, ಶ್ರೀಮಂತರು, ಸೆಲಬ್ರಿಟಿಗಳು, ಸಾಮಾನ್ಯರು ಎಲ್ಲರಿಗೂ ಅನ್ವಯಿಸುತ್ತದೆ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ತಿಳಿಯದೆ ಇರುವವರನ್ನು ಪ್ರೀತಿಸಿ , ಮದುವೆಯಾಗಿ ಅವರೊಂದಿಗೆ ಕೊನೆಯವರೆಗೂ ಜೀವನ ಕಳೆಯುತ್ತಾರೆ.
ನಿರ್ದೇಶಕರ ಕೈ ಹಿಡಿದ ಸ್ಯಾಂಡಲ್ವುಡ್ ನಟಿಯರು ಚಿತ್ರರಂಗದಲ್ಲಿ ಕೆಲವು ನಟಿಯರು ಉದ್ಯಮಿಗಳು, ಇಂಜಿನಿಯರ್ಗಳು, ವೈದ್ಯರು ಹೀಗೆ ನಾನಾ ವೃತ್ತಿಯಲ್ಲಿ ಇರುವವರನ್ನು ಮದುವೆ ಆಗಿ ಸೆಟಲ್ ಆಗಿದ್ದಾರೆ. ಮತ್ತೆ ಕೆಲವರು ಸಿನಿಮಾ ನಿರ್ದೇಶಕರನ್ನೇ ಮದುವೆಯಾಗಿದ್ದಾರೆ. ಹೀಗೆ ಸಿನಿಮಾ ನಿರ್ದೇಶಕರನ್ನು ಕೈ ಹಿಡಿದ ನಟಿಯರ ಬಗ್ಗೆ ಒಂದಷ್ಟು ಮಾಹಿತಿ.
ನಿರ್ದೇಶಕರ ಕೈ ಹಿಡಿದ ಸ್ಯಾಂಡಲ್ವುಡ್ ನಟಿಯರು 1935ರಲ್ಲಿ 'ಸಂಸಾರ ನೌಕೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಎಂ.ವಿ. ರಾಜಮ್ಮ ಡಾ. ರಾಜ್ಕುಮಾರ್ ,ಶಿವಾಜಿ ಗಣೇಶನ್, ಎಂಜಿಆರ್ ಹಾಗೂ ಎನ್ಟಿಆರ್ನಂತಹ ದಿಗ್ಗಜ ನಟರೊಂದಿಗೆ ನಟಿಸಿದ್ಧಾರೆ. ನಂತರ ಅವರು ಕನ್ನಡ ಚಿತ್ರರಂಗದ ಹರಿಕಾರ ಬಿ.ಆರ್. ಪಂತುಲು ಅವರನ್ನು ಮದುವೆಯಾದರು.
ನಿರ್ದೇಶಕರ ಕೈ ಹಿಡಿದ ಸ್ಯಾಂಡಲ್ವುಡ್ ನಟಿಯರು ಸುಮಾರು 300 ಸಿನಿಮಾಗಳಲ್ಲಿ ನಟಿಸಿ, ನಿರ್ದೇಶಕ, ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿರುವ ನಟ ಜೈಜಗದೀಶ್ ಇಂದಿಗೂ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಬಿಗ್ಬಾಸ್ 7 ನೇ ಸೀಸನ್ನಲ್ಲಿ ಸ್ಪರ್ಧಿಯಾಗಿ ಹೋಗಿ ಬಂದರು. ಇವರನ್ನು ವಿಜಯಲಕ್ಷ್ಮಿ ಸಿಂಗ್ ಕೈ ಹಿಡಿದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಇವರೂ ಕೂಡಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ನಿರ್ದೇಶಕರ ಕೈ ಹಿಡಿದ ಸ್ಯಾಂಡಲ್ವುಡ್ ನಟಿಯರು ನಿರ್ದೇಶಕರನ್ನು ಮದುವೆಯಾದ ನಟಿಯರಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ ಕೂಡಾ ಒಬ್ಬರು. ಎಕ್ಸ್ಕ್ಯೂಜ್ ಮಿ, ಕರಿಯ ಹಾಗೂ ಜೋಗಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಹ್ಯಾಟ್ರಿಕ್ ನಿರ್ದೇಶಕ ಎಂದು ಕರೆಸಿಕೊಂಡಿರುವ ನಿರ್ದೇಶಕ ಪ್ರೇಮ್ ಅವರನ್ನು ರಕ್ಷಿತಾ ಪ್ರೀತಿಸಿ ಮದುವೆಯಾದರು. 2007 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ದಂಪತಿಗೆ ಈಗ ಸೂರ್ಯ ಎಂಬ ಮುದ್ದಾದ ಮಗನಿದ್ದಾನೆ. ಪ್ರೇಮ್ ಅವರಲ್ಲಿ ತನ್ನ ತಂದೆ ಗೌರಿಶಂಕರ್ ಅವರ ಗುಣಗಳನ್ನು ನೋಡಿ ರಕ್ಷಿತಾ ಅವರು ಪ್ರೇಮ್ನನ್ನು ಇಷ್ಟಪಟ್ಟರಂತೆ. ಮದುವೆ ನಂತರ ಆ್ಯಕ್ಟಿಂಗ್ನಿಂದ ದೂರವಿದ್ದ ರಕ್ಷಿತಾ ಕೆಲವು ವರ್ಷಗಳ ನಂತರ ಕಿರುತೆರೆಗೆ ಬಂದರು. ಈಗ ಅವರು ನಿರ್ಮಾಪಕಿಯಾಗಿ ತಮ್ಮನ 'ಏಕ್ ಲವ್ ಯಾ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ನಿರ್ದೇಶಕರ ಕೈ ಹಿಡಿದ ಸ್ಯಾಂಡಲ್ವುಡ್ ನಟಿಯರು ಬಂಗಾಳಿ ಚೆಲುವೆ ಪ್ರಿಯಾಂಕ ಉಪೇಂದ್ರ ಅಪ್ಪಟ ಕನ್ನಡಿಗೆ ಉಪೇಂದ್ರ ಅವರನ್ನು ಪ್ರೀತಿಸಿ ಮದುವೆಯಾದರು. ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಪ್ರಿಯಾಂಕ 2003 ರಲ್ಲಿ ಉಪೇಂದ್ರ ಅವರ ಕೈ ಹಿಡಿದರು. 13 ವರ್ಷಗಳ ಯಶಸ್ವಿ ದಾಂಪತ್ಯ ಪೂರೈಸಿರುವ ಈ ಜೋಡಿಗೆ ಆಯುಷ್-ಐಶ್ವರ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ನಿರ್ದೇಶಕರ ಕೈ ಹಿಡಿದ ಸ್ಯಾಂಡಲ್ವುಡ್ ನಟಿಯರು ಇವರೊಂದಿಗೆ ಬಿರುಗಾಳಿ, ಓ ಪ್ರೇಮವೆ, ಗೆಳೆಯ ಚಿತ್ರಗಳಲ್ಲಿ ನಟಿಸಿದ್ದ ಸಿತಾರಾ ವೈದ್ಯ ಕೊರಿಯೋಗ್ರಾಫರ್ ಕಮ್ ನಿರ್ದೇಶಕ ಎ. ಹರ್ಷ ಅವರನ್ನು ಕೈ ಹಿಡಿದಿದ್ದಾರೆ. ಮದುವೆ ನಂತರ ಸಿತಾರ ಸಿನಿಮಾಗಳಿಂದ ಸಂಪೂರ್ಣ ದೂರವಾದರು. ಇವರ ಪತಿ ಎ.ಹರ್ಷ ಅವರು ದರ್ಶನ್, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ನಿರ್ದೇಶಕರ ಕೈ ಹಿಡಿದ ಸ್ಯಾಂಡಲ್ವುಡ್ ನಟಿಯರು ಚಂದನವನದಲ್ಲಿ ಅಳುಮುಂಜಿ ಪಾತ್ರಗಳಿಂದ ಕನ್ನಡಿಗರ ಮನಗೆದ್ದ ನಟಿ ಶೃತಿ. 'ವೀರ ಸಿಂಧೂರ ಲಕ್ಷ್ಮಣ' ಚಿತ್ರದಲ್ಲಿ ಒಂದು ವರ್ಷದ ಮಗುವಾಗಿದ್ದಾಗಲೇ ಬೆಳ್ಳಿ ತೆರೆ ಮೇಲೆ ಶೃತಿ ನಟಿಸಿದ್ದಾರೆ. ನಂತರ 1990ರಲ್ಲಿ ತೆರೆಕಂಡ ದ್ವಾರಕೀಶ್ ಅವರ 'ಶ್ರುತಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಚೆಲುವೆಗೆ ಚಿತ್ರರಂಗದಲ್ಲಿ ಬೇಡಿಕೆ ಇದ್ದಾಗಲೇ ಎಸ್. ಮಹೇಂದರ್ ಅವರನ್ನು ಕೈ ಹಿಡಿದರು. ನಂತರ ಈ ದಂಪತಿ 'ಗಟ್ಟಿಮೇಳ' ಚಿತ್ರದಲ್ಲಿ ಕೂಡಾ ದಂಪತಿಯಾಗಿ ನಟಿಸಿದರು. ಈ ದಂಪತಿಗೆ ಗೌರಿ ಎಂಬ ಮುದ್ದಾದ ಮಗಳಿದ್ದಾಳೆ. ಗೌರಿ ಒಳ್ಳೆಯ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಾರಣಾಂತರಗಳಿಂದ ಶ್ರುತಿ ಹಾಗೂ ಮಹೇಂದರ್ ವಿಚ್ಛೇದನ ಪಡೆದು ಬೇರೆ ಬೇರೆ ಜೀವನ ನಡೆಸುತ್ತಿದ್ದಾರೆ.
ನಿರ್ದೇಶಕರ ಕೈ ಹಿಡಿದ ಸ್ಯಾಂಡಲ್ವುಡ್ ನಟಿಯರು ಕಿರುತೆರ ಮೂಲಕ ಬಣ್ಣದ ಪ್ರಯಾಣ ಆರಂಭಿಸಿ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ನಟಿ ಅಪೇಕ್ಷಾ ಪುರೋಹಿತ್. ಕಾಫಿತೋಟ ಚಿತ್ರದಿಂದ ಸಿನಿಪಯಣ ಆರಂಭಿಸಿದ ಅಪೇಕ್ಷಾ ಅವರು ಗೋವಿಂದಾಯ ನಮಃ ಹಾಗು ಗೂಗ್ಲಿ ಅಂತಂಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಪವನ್ ಒಡೆಯರ್ ಅವರನ್ನು ಪ್ರೀತಿಸಿ, 20 ಆಗಸ್ಟ್ 2018 ರಂದು ಮದುವೆ ಆದರು. ಈ ಜೋಡಿ ಆಗಲೇ 2 ವರ್ಷಗಳ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ.