ಕರ್ನಾಟಕ

karnataka

ETV Bharat / sitara

ಈ ವಿಡಿಯೋವನ್ನ ಸುಮಲತಾ ಅಂಬರೀಶ್​ಗೆ ತಲುಪಿಸಿ: ನಟಿ ವಿಜಯಲಕ್ಷ್ಮಿ ಮನವಿ - ಸುಮಲತಾ ಅಂಬರೀಶ್​ಗೆ ಸಹಾಯ ಮಾಡುವಂತೆ ನಟಿ ವಿಜಯಲಕ್ಷ್ಮಿ ಮನವಿ

ನಟಿ ವಿಜಯಲಕ್ಷ್ಮೀ ಸಹೋದರಿ ಉಷಾ ಸಹ ಅನಾರೋಗ್ಯಕ್ಕೀಡಾಗಿದ್ದು, ವಿಜಯಲಕ್ಷ್ಮಿ ಅವರು ಸಹಾಯ ಮಾಡುವಂತೆ ಕೋರಿ ವಿಡಿಯೋವೊಂದನ್ನು ಮಾಡಿದ್ದಾರೆ. ಈ ವಿಡಿಯೋವನ್ನು ಸಂಸದೆ ಸುಮಲತಾ ಅಂಬರೀಶ್​ ಅವರಿಗೆ ತಲುಪಿಸಿ ಎಂದು ಅವರು ಮನವಿ ಮಾಡಿದ್ದಾರೆ.

actress vijayalakshmi video to mp sumalatha ambarish
ಸಂಸದೆ ಸುಮಲತಾ ಅಂಬರೀಶ್​ಗೆ ಮನವಿ

By

Published : Jul 27, 2021, 3:40 PM IST

ಕನ್ನಡ ಚಿತ್ರರಂಗದಲ್ಲಿ ಸೂರ್ಯವಂಶ, ನಾಗಮಂಡಲ, ಸ್ವಸ್ತಿಕ್, ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತಿ ಹೊಂದಿದ ನಟಿ ವಿಜಯಲಕ್ಷ್ಮಿ, ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋದು ಗೊತ್ತಿರುವ ವಿಚಾರ. ಈಗ ಅವರ ಸಹೋದರಿ ಉಷಾ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಸದ್ಯ ಚೆನ್ನೈನಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೂ ಉಷಾ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೆಲವು ದಿನಗಳ ಹಿಂದೆ, ನಮಗೆ ಸಹಾಯ ಮಾಡಿ ಅಂತಾ ಶಿವರಾಜ್ ಕುಮಾರ್ ಅವರನ್ನು ವಿಡಿಯೋ ಮೂಲಕ, ಕೇಳಿಕೊಂಡಿದ್ರು. ಈಗ‌ ನಟಿ ಹಾಗು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಈ ವಿಡಿಯೋ ತಲುಪಿಸಿ ಅಂತಾ, ಮತ್ತೊಂದು ವಿಡಿಯೋವನ್ನ ಮಾಡಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್​ಗೆ ಮನವಿ

ಉಷಾ ಅವರ ಆರೋಗ್ಯ ಸ್ಥಿತಿ ಮತ್ತೆ ಗಂಭೀರವಾಗಿದೆ. 15 ವರ್ಷಗಳಿಂದ ನಾವು ತಮಿಳುನಾಡಿನಲ್ಲಿ ಇದ್ದೇವೆ. ವಿಚ್ಛೇದನಕ್ಕಾಗಿ ನಾವು ಇಲ್ಲೇ ಹೋರಾಟ ಮಾಡುತ್ತಿದ್ದೇವೆ. ರಾಜಕೀಯದಲ್ಲಿ ಸಕ್ರಿಯವಾಗಿರುವ, ಬಿಜೆಪಿಯಲ್ಲಿರುವ ಜಯಪ್ರದ ಅವರು ನಮ್ಮ ಕುಟುಂಬಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ನಮಗೆ ನೋವಿದೆ. ಕೋರ್ಟ್‌ಗೆ ಜಯಪ್ರದ ಅಣ್ಣ ರಾಜ್‌ಬಾಬು ಅಂದರೆ ಉಷಾ ಅವರ ಗಂಡ ಬರುವುದಿಲ್ಲ. ಚಿತ್ರರಂಗದ ಹಿರಿಯರಿಂದಲೂ ಸಮಸ್ಯೆ ಬಗೆಹರಿಯುತ್ತಿಲ್ಲ. ಇದನ್ನ ಹೇಗೆ ಅಂತ್ಯ ಮಾಡಬೇಕು ಅನ್ನೋದು ನಮಗೆ ಗೊತ್ತಾಗುತ್ತಿಲ್ಲ ಎಂದು ವಿಜಯಲಕ್ಷ್ಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್​

ಜಯಪ್ರದ ಅವರ ಮನೆಯಿಂದ ನಮಗೆ ಸಾಕಷ್ಟು ತೊಂದರೆ ಆಗಿದೆ. ನನ್ನ ಅಕ್ಕ ಉಷಾ ಮಗುವನ್ನ ಎತ್ತಿಕೊಂಡು ನಮ್ಮ ಮನೆಗೆ ಬಂದು 15 ವರ್ಷಗಳು ಆಗಿವೆ. ಜಯಪ್ರದ ಅವರು ಅವತ್ತಿನಿಂದ ಇವತ್ತಿನವರೆಗೂ ಒಂದು ರೂಪಾಯಿಯನ್ನೂ ನಮಗೆ ಕೊಟ್ಟಿಲ್ಲ. ಅಂದು ಅಂಬರೀಶ್ ಅವರನ್ನು ಸಂಪರ್ಕ ಮಾಡೋಕೆ ನನ್ನನ್ನ ಬಿಡಲಿಲ್ಲ. ಈಗ ಸುಮಲತಾ ಅಂಬರೀಶ್ ಅವರನ್ನೂ ಸಂಪರ್ಕ ಮಾಡಲು ನನ್ನನ್ನ ಬಿಡಲ್ಲ. ಹೀಗಾಗಿ ಈ ವಿಡಿಯೋವನ್ನು ಸುಮಲತಾ ಅಂಬರೀಶ್‌ಗೆ ತಲುಪಿಸಿ. ಸುಮಲತಾ ಅಂಬರೀಶ್ ಅವರು ಜಯಪ್ರದ ಅವರ ಬಳಿ ಮಾತನಾಡಿ, ಉಷಾಗೆ ನ್ಯಾಯ ಕೊಡಿಸಲಿ. ಉಷಾ ಚಿಕಿತ್ಸೆಗೆ ಜಯಪ್ರದ ಸಹಾಯ ಮಾಡಲಿ ಅಂತಾ ವಿಡಿಯೋ ಮೂಲಕ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.

ABOUT THE AUTHOR

...view details