ಕರ್ನಾಟಕ

karnataka

ETV Bharat / sitara

ಕರ್ನಾಟಕವೇ ಕುಟುಂಬ, ಕನ್ನಡದಲ್ಲೇ ಸಿನಿಮಾ‌ ಮಾಡ್ತೀನಿ.. ಕನ್ನಡಿಗರ ಔದಾರ್ಯಕ್ಕೆ ಶರಣೆಂದ ನಟಿ ವಿಜಯಲಕ್ಷ್ಮಿ.. - ನಟಿ ವಿಜಯಲಕ್ಷ್ಮಿ ಕುಟುಂಬ

ಕರ್ನಾಟಕದ ಅಭಿಮಾನಿಗಳು ನನ್ನ‌ ಕಷ್ಟಕ್ಕೆ ಸ್ಪಂದಿಸಿದ್ದಾರೆ‌. ಭಿಕ್ಷೆ ಅಂತಾ ಆದ್ರೂ ತಿಳಿದುಕೊಂಡು ಸಹಾಯ ಮಾಡಿ ಅಂದಿದ್ದಕ್ಕೆ, 1ರೂ.ಯಿಂದ ಸಾವಿರದವರೆಗೆ ಹಣ ನನ್ನ ಅಕೌಂಟ್​ಗೆ ಬಂದಿದೆ. ಒಟ್ಟು 3.9 ಲಕ್ಷ ರೂ. ಹಣ ನನ್ನ ಖಾತೆಗೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು..

actress-vijayalakshmi-statement-on-kannada-film-industry
ನಟಿ ವಿಜಯಲಕ್ಷ್ಮಿ

By

Published : Oct 1, 2021, 6:31 PM IST

ಸ್ಯಾಂಡಲ್​ವುಡ್​ನಲ್ಲಿ ನಾಗಮಂಡಲ, ಸೂರ್ಯವಂಶ, ಹಬ್ಬ ಸಿನಿಮಾಗಳು ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಒಂದು ಕಾಲದಲ್ಲಿ ಕನ್ನಡದಲ್ಲಿ ಮಿಂಚಿದ್ದ ನಟಿ‌ ವಿಜಯಲಕ್ಷ್ಮಿ. ಕೆಲವು ತಿಂಗಳಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಅಲ್ಲದೆ, ಇತ್ತೀಚಿಗಷ್ಟೆ ಅವರ ತಾಯಿ ವಿಜಯಾ ಸುದರಂ ಅನಾರೋಗ್ಯದಿಂದ ಮೃತ ಪಟ್ಟಿದರು.

ಜನಸ್ನೇಹಿ ನಿರಾಶ್ರಿತರ ಆಶ್ರಮದ ಯೋಗೇಶ್ ವಿಜಯಲಕ್ಷ್ಮಿ ತಾಯಿಯ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಿದ್ದರು. ಆದರೆ, ಕನ್ನಡ ಚಿತ್ರರಂಗ ಯಾವುದೇ ಸಹಾಯ ಮಾಡಿಲ್ಲವಾ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.

ಕನ್ನಡ ಚಿತ್ರರಂಗದ ಕುರಿತು ನಟಿ ವಿಜಯಲಕ್ಷ್ಮಿ ಹೀಗಂತಾರೆ..

ಈ ಬಗ್ಗೆ ತಿಳಿಸಲು ನಟಿ ವಿಜಯಲಕ್ಷ್ಮಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಫಿಲ್ಸ್ಮ್‌ ಚೇಂಬರ್ ಅಧ್ಯಕ್ಷ ಜಯರಾಜ್, ಗೌರವ ಕಾರ್ಯದರ್ಶಿ‌ ಎನ್ ಎಂ ಸುರೇಶ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕ ಭಾಮಾ ಹರೀಶ್ ಸಮ್ಮುಖದಲ್ಲಿ ತುರ್ತು ಪತ್ರಿಕಾಗೋಷ್ಠಿ ಮಾಡಿದರು.

ಅಮ್ಮ ತೀರಿಹೋದ ತಕ್ಷಣ ಏನು ಮಾಡ್ಬೇಕು ಅಂತಾ ತೋಚಲಿಲ್ಲ. ಆ ಸಮಯದಲ್ಲಿ ನಿರ್ಮಾಪಕ, ಭಾ.ಮಾ. ಹರೀಶ್ ನನಗೆ ಸಹಾಯ ಮಾಡಿದ್ರು. ಶಿವರಾಜ್ ಕುಮಾರ್ ಹಾಗೂ ಯಶ್ ಹತ್ತಿರ ಮಾತನಾಡಿದ್ದೆ. ಕಲಾವಿದರು ಎಲ್ಲಾ ಒಂದೇ, ನಾನು ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಸಿನಿಮಾ ಮಾಡ್ತೀನಿ ಎಂದು ವಿಜಯಲಕ್ಷ್ಮಿ ‌ಹೇಳಿದರು‌.

ಕರ್ನಾಟಕದ ಅಭಿಮಾನಿಗಳು ನನ್ನ‌ ಕಷ್ಟಕ್ಕೆ ಸ್ಪಂದಿಸಿದ್ದಾರೆ‌. ಭಿಕ್ಷೆ ಅಂತಾ ಆದ್ರೂ ತಿಳಿದುಕೊಂಡು ಸಹಾಯ ಮಾಡಿ ಅಂದಿದ್ದಕ್ಕೆ, 1ರೂ.ಯಿಂದ ಸಾವಿರದವರೆಗೆ ಹಣ ನನ್ನ ಅಕೌಂಟ್​ಗೆ ಬಂದಿದೆ. ಒಟ್ಟು 3.9 ಲಕ್ಷ ರೂ. ಹಣ ನನ್ನ ಖಾತೆಗೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಜಯಲಕ್ಷ್ಮಿ ನೆರವಿಗೆ ಕನ್ನಡ ಚಿತ್ರರಂಗ ಬಂದಿಲ್ಲ ಎಂಬ ಲಾಯರ್ ಜಗದೀಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಜಯಲಕ್ಷ್ಮಿ, ಜಗದೀಶ್ ಮಾತನಾಡಿರೋದು ತಪ್ಪು. ಕನ್ನಡ ಚಿತ್ರರಂಗದವರು ನಾವೆಲ್ಲ ಒಂದೇ ಎಂದರು.

ವಕೀಲ ಜಗದೀಶ್ ವಿರುದ್ಧ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್ ಎಂ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ವಿಜಯಲಕ್ಷ್ಮಿಯವರ ಅಮ್ಮ ತೀರಿಕೊಂಡಾಗ ನಿರ್ಮಾಪಕ ಭಾ.ಮಾ. ಹರೀಶ್ ಸಹಾಯಕ್ಕೆ ಹೋಗಿದ್ರು. ಜನಸ್ನೇಹಿ ನಿರಾಶ್ರಿತರ ಆಶ್ರಮದಲ್ಲಿ ಯೋಗೀಶ್ ಅವರು ವಿಜಯಲಕ್ಷ್ಮಿ ಅಮ್ಮನ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಆದ್ರೆ, ಲಾಯರ್ ಜಗದೀಶ್ ಅವರು ಕನ್ನಡ ಚಿತ್ರರಂಗದ‌ ಬಗ್ಗೆ ಕೆಟ್ಟದಾಗಿ ಮಾತನಾಡಿ, ಅನ್ ಪಾರ್ಲಿಮೆಂಟರಿ ಪದ ಬಳಕೆ ಮಾಡಿದ್ದಾರೆ. ಈ ರೀತಿ ಚಿತ್ರರಂಗದ ವಿರುದ್ಧ ಮಾತನಾಡಬೇಡಿ ಎಂದು ಜಗದೀಶ್​ಗೆ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಯ ಮೂಲಕ ಜನಸ್ನೇಹಿ ನಿರಾಶ್ರಿತರ ಆಶ್ರಮ ಕಲೆಕ್ಟ್ ಮಾಡಿದ್ದ ಹಣವನ್ನ ವಿಜಯಲಕ್ಷ್ಮಿಯವರಿಗೆ ಚೆಕ್ ಮೂಲಕ ನೀಡಲಾಯಿತು.

ABOUT THE AUTHOR

...view details