ಕರ್ನಾಟಕ

karnataka

ETV Bharat / sitara

ಮತ್ತೊಂದು ಸಂಕಷ್ಟದಲ್ಲಿ ವಿಜಯಲಕ್ಷ್ಮಿ: ಸಹೋದರಿಗಾಗಿ ಶಿವಣ್ಣನ ಸಹಾಯ ಕೇಳಿದ ನಟಿ - ಸಹೋದರಿಗಾಗಿ ಶಿವಣ್ಣನ ಸಹಾಯ ಕೇಳಿದ ನಟಿ ವಿಜಯಲಕ್ಷ್ಮಿ

ಈ ಹಿಂದೆ ಅನಾರೋಗ್ಯಕ್ಕೀಡಾಗಿ ಸಂಕಷ್ಟ ಎದುರಿಸಿ ಚೇತರಿಸಿಕೊಂಡಿರುವ ನಟಿ ವಿಜಯಲಕ್ಷ್ಮೀ ಅವರಿಗೆ ಮತ್ತೊಂದು ತೊಂದರೆಯಲ್ಲಿ ಸಿಲುಕಿದ್ದಾರೆ. ಈ ಸಲ ಅವರ ಸಹೋದರಿ ಉಷಾ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆಗಾಗಿ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದಾರೆ.

actress vijayalakshmi request for financial help to treat her sister
ಸಹೋದರಿಗಾಗಿ ಸಹಾಯ ಯಾಚಿಸಿದ ನಟಿ ವಿಜಯಲಕ್ಷ್ಮಿ

By

Published : May 31, 2021, 11:52 AM IST

ಸೂರ್ಯವಂಶ, ನಾಗಮಂಡಲ, ಸ್ವಸ್ತಿಕ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತಿ ಹೊಂದಿರುವ ನಟಿ ವಿಜಯಲಕ್ಷ್ಮೀ ಅವರು ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಅವರ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದು, ಚೆನ್ನೈನಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಉಷಾ ಅವರ ಆರೋಗ್ಯ ಚಿಂತಾಜನಕವಾಗಿದ್ದು ಕಷ್ಟದ ಸಂದರ್ಭದಲ್ಲಿ ತಮಗೆ ಸಹಾಯ ನೀಡುವಂತೆ ವಿಡಿಯೋ ಮೂಲಕ ವಿಜಯಲಕ್ಷ್ಮೀ ಮನವಿ ಮಾಡಿದ್ದಾರೆ.

ಸಹೋದರಿಯ ಚಿಕಿತ್ಸೆಗಾಗಿ ಸಹಾಯ ಯಾಚಿಸಿದ ನಟಿ ವಿಜಯಲಕ್ಷ್ಮಿ

ತಮ್ಮ ಈ ಕಷ್ಟವನ್ನು ಶಿವರಾಜ್​ಕುಮಾರ್​ ಅವರ ಗಮನಕ್ಕೆ ತರುವಂತೆ ವಿಜಯಲಕ್ಷ್ಮೀ ಅಳಲು ತೋಡಿಕೊಂಡಿದ್ದಾರೆ. ಉಷಾ ಆರೋಗ್ಯದ ಬಗ್ಗೆ ಆತಂಕದಲ್ಲಿದ್ದೇನೆ. ಅವರ ಪರಿಸ್ಥಿತಿ ಕ್ರಿಟಿಕಲ್​ ಆಗಿದೆ. ಗರ್ಭಕೋಶದಲ್ಲಿ​ ಮೂರು ದೊಡ್ಡ ಗಡ್ಡೆಗಳಿದ್ದು, ಅವು ದೊಡ್ಡದಾಗಿದ್ದರಿಂದ ಗರ್ಭಕೋಶ ತೆಗೆಯಬೇಕಾಯಿತು. ಕಳೆದ ತಿಂಗಳು 14ರಂದು ವೈದ್ಯರು ಸರ್ಜರಿ ಮಾಡಿದರು. ಆ ಬಳಿಕ ಅವರು ತುಂಬ ವೀಕ್​ ಆಗಿದ್ದರು. ನೀರು ಕೂಡಾ ಕುಡಿಯೋಕೆ ಆಗುತ್ತಿರಲಿಲ್ಲ. ಊಟ ಮಾಡಲು ಕಷ್ಟ ಆಗಿತ್ತು. ಆ ಆಸ್ಪತ್ರೆಯಲ್ಲಿ ಕೊವಿಡ್​ ಸೋಂಕಿತರು ಇದ್ದಿದ್ದರಿಂದ ಉಷಾ ಅಲ್ಲಿರುವುದು ಬೇಡ ಎಂದು ಡಾಕ್ಟರ್​ ಹೇಳಿದರು. ಮನೆಗೆ ಕರೆದುಕೊಂಡು ಬಂದ ಬಳಿಕ ಅವರಿಗೆ ಏನೇ ತಿಂದರೂ ಬ್ಲೀಡಿಂಗ್​ ಶುರುವಾಯಿತು. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಕೋವಿಡ್​ ಇರುವುದರಿಂದ ಇಲ್ಲಿಗೆ ಬರಬೇಡಿ ಅಂತ ಹೇಳಿದರು ಎಂದು ವಿಡಿಯೋದಲ್ಲಿ ವಿಜಯಲಕ್ಷ್ಮಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಇನ್ನು ಉಷಾ ತುಂಬಾ ವೀಕ್​​ ಆಗಿದ್ದಾರೆ. ಎರಡು ಮೂರು ದಿನದಿಂದ ನೆನಪು ಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಮಾತನಾಡೋಕೆ ಆಗುತ್ತಿಲ್ಲ. ಸರ್ಜರಿ ಆದ ನಂತರ ಇಷ್ಟೆಲ್ಲ ಆಗಿದೆ. ಡಾಕ್ಟರ್​ ಜೊತೆ ಮಾತಾಡಿ ನನಗೆ ಸಾಕಾಗಿದೆ. ಯಾರೂ ಕೂಡ ಅವರು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಈಗ ಉಷಾ ಅವರಿಗೆ ಬೇರೆ ಕಡೆ ಚಿಕಿತ್ಸೆ ಕೊಡಿಸೋಕೆ ನಮ್ಮ ಬಳಿ ದುಡ್ಡಿಲ್ಲ. ನಾವೀಗ ಬಹಳ ನೋವಿನಲ್ಲಿ ಇದ್ದೇವೆ. ಕರ್ನಾಟಕದಲ್ಲಿರುವ ಜನರು, ಅಭಿಮಾನಿಗಳು ಮತ್ತು ಚಿತ್ರರಂಗದ ಹಿರಿಯ ನಟರು ನನಗೆ ಸಹಾಯ ಮಾಡಿ. ದಯವಿಟ್ಟು ಇದನ್ನು ಶಿವಣ್ಣ ಅವರ ಗಮನಕ್ಕೆ ತನ್ನಿ ಎಂದು ಕೇಳಿಕೊಳ್ಳುತ್ತೇನೆ. ಇಲ್ಲಿಯೂ ರಜನಿಕಾಂತ್​ ಮುಂತಾದ ದೊಡ್ಡ ನಟರು ಇದ್ದಾರೆ. ಅವರಿಗೆ ಕರ್ನಾಟಕದ ಹಿರಿಯರು ವಿಷಯ ತಿಳಿಸಿದರೆ ನಮಗೆ ಸಹಾಯ ಆಗುತ್ತದೆ. ನನಗೆ ಅದನ್ನು ಒಬ್ಬಳೇ ಹೇಗೆ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

For All Latest Updates

ABOUT THE AUTHOR

...view details