ಕರ್ನಾಟಕ

karnataka

ETV Bharat / sitara

ಸೃಜನ್ ಲೋಕೇಶ್​ಗೆ ಮೋಸ ಮಾಡುವ ಉದ್ದೇಶವಿದ್ದಿದ್ದರೆ ಎಂಗೇಜ್​​​​​ಮೆಂಟ್ ಆಗುತ್ತಿರಲಿಲ್ಲ: ನಟಿ ವಿಜಯಲಕ್ಷ್ಮಿ - ನಟಿ ಜಯಪ್ರದಾ

ನಟಿ ವಿಜಯಲಕ್ಷ್ಮಿ ತಮ್ಮ ಸಹೋದರಿ ಚಿಕಿತ್ಸೆಗಾಗಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ನಟಿ ವಿರುದ್ಧ ಪರ ವಿರೋಧ ಚರ್ಚೆಗಳು, ಟೀಕೆಗಳು ಆರಂಭವಾಗಿದ್ದವು. ಇದಕ್ಕೆಲ್ಲ ಉತ್ತರಿಸಿರುವ ವಿಜಯಲಕ್ಷ್ಮಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನಟಿ ವಿಜಯಲಕ್ಷ್ಮಿ
ನಟಿ ವಿಜಯಲಕ್ಷ್ಮಿ

By

Published : Jun 3, 2021, 3:31 PM IST

Updated : Jun 4, 2021, 3:52 PM IST

ಕನ್ನಡ ಚಿತ್ರರಂಗದಲ್ಲಿ ಸೂರ್ಯವಂಶ, ನಾಗಮಂಡಲ, ಸ್ವಸ್ತಿಕ್ ಸಿನಿಮಾ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ವಿಜಯಲಕ್ಷ್ಮಿ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಾಗೇ ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಅವರ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದರು. ಚೆನ್ನೈನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಉಷಾ ಆರೋಗ್ಯ ಚಿಂತಾಜನಕವಾಗಿದೆ. ಈ ಕಷ್ಟದ ಸಂದರ್ಭದಲ್ಲಿ ತಮಗೆ ಸಹಾಯ ಮಾಡುವಂತೆ ಶಿವರಾಜ್ ಕುಮಾರ್ ಅವರಲ್ಲಿ ವಿಜಯಲಕ್ಷ್ಮಿ ಮನವಿ ಮಾಡಿದ್ದರು. ಆದರೆ ಈಗ ವಿಜಯಲಕ್ಷ್ಮಿ, ಬಹುಭಾಷಾ ನಟಿ ಜಯಪ್ರದಾ ಬಗ್ಗೆ ನೇರವಾಗಿ ತಮ್ಮ ಆರೋಪ ಮಾಡಿದ್ದಾರೆ.

ನಟಿ ವಿಜಯಲಕ್ಷ್ಮಿ

ಯಾರೂ ಹಿರಿಯ ನಟಿ ಜಯಪ್ರದಾ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ. ಅವರು ಮಾಡಿರುವ ತಪ್ಪಿನ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಜಯಪ್ರದಾ ಮಾಡಿರುವುದು ತಪ್ಪಲ್ವಾ..? ವಿಜಯಲಕ್ಷ್ಮಿ ಭವಿಷ್ಯ ಏನು ಅಂತ ಯಾರಾದ್ರು ಕೇಳಿದ್ದಾರಾ..? ಅಂತ ಪ್ರಶ್ನಿಸಿದ್ದಾರೆ.

ನಟಿ ವಿಜಯಲಕ್ಷ್ಮಿ

ನಟ ಸೃಜನ್​ ಲೋಕೇಶ್​ಗೆ ಮೋಸ ಮಾಡಿದ್ದಕ್ಕೆ ನಾನು ಬೀದಿಗೆ ಬಂದೆ ಅಂತಿದ್ದಾರೆ. ಹಾಗಾದ್ರೆ ಉಷಾಗೆ ನಟಿ ಜಯಪ್ರದಾ ಮೋಸ ಮಾಡಿಲ್ವಾ..? ಅದನ್ಯಾರು ಕೇಳೋರಿಲ್ಲ. ಯಾವಾಗ್ಲೂ ವಿಜಯಲಕ್ಷ್ಮಿ ಒಬ್ಬಳೇ ವಿಲನ್​, ನಾನು ಪ್ರತಿದಿನ ನರಳಾಡುತ್ತಿರುವ ಸುದ್ದಿ ಕೇಳಬೇಕಾ ನೀವು..? ನಾನೇನು ಸೃಜನ್ ಲೋಕೇಶ್ ಅವರಿಗೆ ಮೋಸ ಮಾಡಿಲ್ಲ. ಮೋಸ ಮಾಡುವುದಾಗಿದ್ದರೆ ಅಷ್ಟು ಲಕ್ಷ ಖರ್ಚು ಮಾಡಿ ಎಂಗೇಜ್​ಮೆಂಟ್ ಮಾಡಿಕೊಳ್ಳುತ್ತಿರಲಿಲ್ಲ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

Last Updated : Jun 4, 2021, 3:52 PM IST

ABOUT THE AUTHOR

...view details