ಬೆಂಗಳೂರು :ಗಾನ ಗಂಧರ್ವ, ಸ್ವರ ಸಾಮ್ರಾಟ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನರಾಗಿ ಇವತ್ತಿಗೆ 13 ದಿನ ಕಳೆಯುದಿವೆ. ಈ ಹಿನ್ನೆಲೆ ಭಾರತಿನಗರ ನಾಗರಿಕ ವೇದಿಕೆ ಸಹಯೋಗದೊಂದಿಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ತಾರಾ ಅನುರಾಧ, ಗಾಯಕಿ ಅರ್ಚನಾ ಉಡುಪ ಸ್ವರ ಮಾಂತ್ರಿಕನನ್ನ ಸ್ಮರಿಸಿದ್ದಾರೆ.
ಅಂಧ ಮಕ್ಕಳ ಜೊತೆ ಎಸ್ಪಿಬಿಯನ್ನು ಸ್ಮರಿಸಿದ ನಟಿ ತಾರಾ ಅನುರಾಧ - Thara anuradha remember sp balasubrahmanyam
ಈ ಸಂದರ್ಭದಲ್ಲಿ ಬಡ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಹಾಡುಗಳನ್ನ ಮಕ್ಕಳಿಗೆ ಕೇಳಿಸಲಾಯಿತು..
ಅಂಧ ಮಕ್ಕಳ ಜೊತೆ ಎಸ್ಪಿಬಿಯನ್ನು ಸ್ಮರಿಸಿದ ನಟಿ ತಾರ ಅನುರಾಧ
ಬೆಂಗಳೂರಿನ ಮೌನ ಗುರು ಮಠದಲ್ಲಿರುವ ಬಡ ಮತ್ತು ಅಂಧ ಮಕ್ಕಳ ಜೊತೆಗೂಡಿ ನಟಿ ತಾರಾ ಅನುರಾಧ, ಗಾಯಕಿ ಅರ್ಚನಾ ಉಡುಪ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬಡ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಹಾಡುಗಳನ್ನ ಮಕ್ಕಳಿಗೆ ಕೇಳಿಸಲಾಯಿತು.