ರಾಜಾ ರಾಣಿ ರಿಯಾಲಿಟಿ ಶೋ ಮೂಲಕ ಮೊಟ್ಟಮೊದಲ ಬಾರಿಗೆ ಕಾರ್ಯಕ್ರಮವೊಂದರ ಜಡ್ಜ್ ಆಗಿ ನಟಿ ತಾರಾ ಅನುರಾಧ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿ ಶನಿವಾರ ಹಾಗೂ ಭಾನುವಾರದಂದು ರಾತ್ರಿ 7.30 ರಿಂದ 9ರವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಶೋ ಪ್ರಸಾರವಾಗಲಿದೆ. ಜುಲೈ 10 ರಿಂದ ಈ ರಿಯಾಲಿಟಿ ಶೋ ಆರಂಭವಾಗಿದೆ.
ಈ ಬಗ್ಗೆ ಮಾತನಾಡಿರುವ ನಟಿ ತಾರಾ ಅನುರಾಧ, ಜೀವನದ ಪ್ರತಿ ಹಂತಗಳು ಹಾಗೂ ನೋವು-ನಲಿವಿನ ಕ್ಷಣಗಳನ್ನು ಮತ್ತೆ ನೆನಪಿಸಿಕೊಳ್ಳುವಂತ ಕಾರ್ಯಕ್ರಮ ಇದಾಗಿದೆ. ಈ ಸಂದರ್ಭದಲ್ಲಿ ನನ್ನ ಜೀವನದ ಕ್ಷಣಗಳನ್ನು ಕೂಡ ಮೆಲುಕು ಹಾಕುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.