ಸೆಲಬ್ರಿಟಿಗಳು ಕೂಡಾ ಈ ಬಾರಿ ಬಹಳ ಸರಳವಾಗಿ ಹಬ್ಬ ಆಚರಿಸಿದ್ದಾರೆ. ಹಿರಿಯ ನಟಿ, ಮಾಜಿ ಎಂಎಲ್ಸಿ ತಾರಾ ಅನುರಾಧ ಅವರ ಮನೆಯಲ್ಲಿ ಕೂಡಾ ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬ ಸರಳವಾಗಿ ನಡೆದರೂ ತಾರಾ ಮನೆಯಲ್ಲಿ ಹಬ್ಬದ ಸಂಭ್ರಮ ಜೋರಾಗಿತ್ತು. ಪೂಜೆ ಪುನಸ್ಕಾರ ಮುಗಿಸಿದ ತಾರಾ, ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭ ಕೋರಿದ್ದಾರೆ.
ಹಿರಿಯ ನಟಿ ತಾರಾ ಅನುರಾಧ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಭ್ರಮ - Varamahalakshmi festival
ಕೊರೊನಾ ಭೀತಿ ನಡುವೆಯೂ ಇಂದು ರಾಜ್ಯಾದ್ಯಂತ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬವನ್ನು ಜನರು ಆಚರಿಸುತ್ತಿದ್ದಾರೆ. ಕೆಲವರು ಎಂದಿನಂತೆ ಬಹಳ ಅದ್ಧೂರಿಯಾಗಿ ಆಚರಿಸಿದರೆ ಮತ್ತೆ ಕೆಲವರು ಈ ಬಾರಿ ಬಹಳ ಸರಳವಾಗಿ ಹಬ್ಬ ಆಚರಿಸಿದ್ದಾರೆ.
ತಾರಾ ಅನುರಾಧ
ಇಡೀ ಜಗತ್ತನ್ನೇ ನಡುಗಿಸಿರುವ ಕೊರೊನಾ ವೈರಾಣುವನ್ನು ಆ ತಾಯಿ ನಾಶ ಮಾಡಲಿ, ಒಳ್ಳೆ ಮಳೆ-ಬೆಳೆಯಾಗಿ ನಾವೆಲ್ಲಾ ಸುಖ ಶಾಂತಿ ನೆಮ್ಮದಿಯಿಂದ ಇರುವಂತಾಗಲಿ ಎಂದು ಶುಭ ಹಾರೈಸಿದ್ದಾರೆ. ಪ್ರತಿ ವರ್ಷ ನಟಿ ತಾರ ಪೌರ ಕಾರ್ಮಿಕರಿಗೆ ಬಾಗಿನ ನೀಡುವ ಮೂಲಕ ಹಬ್ಬ ಆಚರಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಅದ್ಧೂರಿ ಆಚರಣೆಗೆ ಬ್ರೇಕ್ ಬಿದ್ದಿರುವುದರಿಂದ ಕುಟುಂಬದವರ ಜೊತೆ ಸೇರಿ ಹಬ್ಬ ಆಚರಿಸಿದ್ದಾರೆ.