ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಕೋಟ್ಯಂತರ ಭಾರತೀಯರು ಅದೆಷ್ಟೋ ವರ್ಷಗಳಿಂದ ಕಾಯುತ್ತಿದ್ದ ಕನಸು ಇಂದು ನನಸಾಗಿದೆ.
ಎಲ್ಲರೂ ಮನೆಯಲ್ಲಿ ದೀಪ ಹಚ್ಚಿ ಸಂಭ್ರಮಿಸೋಣ...ಹಿರಿಯ ನಟಿ ತಾರಾ - Ayodhya Ramjanam bhoomi puja
ಅಯೋಧ್ಯೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರ ನಿರ್ಮಾಣದಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ. ಹಿರಿಯ ನಟಿ ತಾರಾ ಕೂಡಾ ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು ಎಲ್ಲರೂ ದೀಪ ಹಚ್ಚಿ ಸಂಭ್ರಮಿಸೋಣ ಎಂದು ಕರೆ ನೀಡಿದ್ದಾರೆ.
ಪ್ರತಿ ರಾಜ್ಯದಲ್ಲೂ, ಪ್ರತಿ ಮನೆಯಲ್ಲೂ ಇಂದು ಹಬ್ಬದ ಸಂಭ್ರಮ ಮನೆ ಮಾಡಿದೆ. ಸ್ಯಾಂಡಲ್ವುಡ್ ಹಿರಿಯ ನಟಿ ತಾರಾ ಅನುರಾಧ ಕೂಡಾ ಇಂದು ರಾಮಮಂದಿರದ ನಿರ್ಮಾಣದ ಕನಸು ನನಸಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. "500 ವರ್ಷಗಳ ಇತಿಹಾಸ, 70 ಕ್ಕೂ ಹೆಚ್ಚು ವರ್ಷಗಳ ನ್ಯಾಯಾಂಗ ಹೋರಾಟದ ನಂತರ ಕೋಟ್ಯಂತರ ರಾಮಧೂತರ ಕನಸು ಇಂದು ನನಸಾಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿರುವುದು ನಮಗೆಲ್ಲಾ ಖುಷಿಯ ವಿಚಾರ. ಈ ಕನಸನ್ನು ಸಾಕಾರಗೊಳಿಸಿದ ಎಲ್ಲಾ ಮಹನೀಯರಿಗೂ ಶುಭ ಹಾರೈಕೆಗಳು. ಈ ಶುಭದಿನ ಪೂರ್ತಿ ರಾಮಜಪ ಮಾಡಿ ಲೋಕಕಲ್ಯಾಣಕ್ಕೆ ಪ್ರಾರ್ಥಿಸೋಣ. ನಮ್ಮ ಮನೆಗಳಲ್ಲಿ ದೀಪ ಹಚ್ಚಿ ಸಂಭ್ರಮಿಸೋಣ" ಎಂದು ತಾರಾ ಕರೆ ನೀಡಿದ್ದಾರೆ.