ಕರ್ನಾಟಕ

karnataka

ETV Bharat / sitara

ಹೊಸ ಬಾಳಿಗೆ ಕಾಲಿಟ್ಟ ಚಿತ್ರಾನ್ನ ಬೆಡಗಿ: ಉದ್ಯಮಿ ಸುಜನ್ ಕೈ ಹಿಡಿದ ಸುಮನ್​​​​​..! - undefined

ನಟಿ ಸುಮನ್ ರಂಗನಾಥನ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಜೂನ್ 3 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. 8 ತಿಂಗಳ ಹಿಂದೆ ಪರಿಚಯವಾದ ಉದ್ಯಮಿ ಸುಜನ್ ಅವರನ್ನು ಪ್ರೀತಿಸಿ ಕುಟುಂಬಸ್ಥರ, ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಸುಮನ್ ರಂಗನಾಥನ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

By

Published : Jun 6, 2019, 5:33 PM IST

ಶಂಕರ್​​ನಾಗ್ ಅಭಿನಯದ ಸಿಬಿಐ ಶಂಕರ್​​ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಸುಮನ್ ರಂಗನಾಥನ್​​​ ನಂತರ ತೆಲುಗು, ತಮಿಳು, ಮಲಯಾಳಂ, ಬೆಂಗಾಳಿ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.

ಸುಜನ್​​, ಸುಮನ್ ರಂಗನಾಥನ್​​

ಸದ್ಯಕ್ಕೆ ದಂಡುಪಾಳ್ಯ - 4, ಲೇಡಿಸ್ ಟೈಲರ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಸುಮನ್ ರಂಗನಾಥನ್​​​ ಈ ನಡುವೆ ದಾಂಪತ್ಯ ಜೀವನಕ್ಕೂ ಕಾಲಿರಿಸಿ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಉದ್ಯಮಿ ಸುಜನ್ ಜೊತೆಗೆ ಸುಮನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 3 ರಂದು ಸುಮನ್​​​ ಹಾಗೂ ಸುಜನ್​​ ರಿಜಿಸ್ಟರ್ ಮದುವೆ ಆಗಿದ್ದಾರೆ. ಸರಳ ವಿವಾಹ ಕಾರ್ಯಕ್ರಮ ಜರುಗಿದ್ದು, ಹತ್ತಿರದ ಸ್ನೇಹಿತರು ಹಾಗೂ ಸಂಬಂಧಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಂತೆ. ಸುಜನ್ ಹಾಗೂ ಸುಮನ್ ರಂಗನಾಥನ್ 8 ತಿಂಗಳ ಹಿಂದೆ ಪರಿಚಯ ಆಗಿದ್ದು ಕೆಲವು ದಿನಗಳ ಬಳಿಕ ಡೇಟಿಂಗ್ ನಡೆಸಿ ಇದೀಗ ವಿವಾಹವಾಗಿದ್ದಾರೆ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details