ಪ್ರತಿಯೊಬ್ಬರಿಗೂ ತಮ್ಮ ಬಾಲ್ಯದ ನೆನಪುಗಳು ಸದಾ ಹಸಿರಾಗಿರುತ್ತದೆ. ಬಾಲ್ಯ ಮತ್ತೆ ಬರಬಾರದೇ ಎಂದು ಎಲ್ಲರೂ ಆಸೆ ಪಡುವುದು ಸಹಜ. ಇನ್ನು ಜೋಪಾನವಾಗಿರಿಸಿದ ಬಾಲ್ಯದ ಫೋಟೋಗಳನ್ನು ಆಗ್ಗಾಗ್ಗೆ ನೋಡದಿದ್ದರಂತೂ ಕೆಲವರಿಗೆ ಸಮಾಧಾನವಾಗುವುದಿಲ್ಲ. ಇದೀಗ ಲಾಕ್ಡೌನ್ ಇರುವುದರಿಂದ ಬಹಳಷ್ಟು ಜನರು ತಮ್ಮ ಹಳೆಯ ಫೋಟೋ ಆಲ್ಬಂಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೆ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುತ್ತಿದ್ದಾರೆ.
ಖ್ಯಾತ ಸ್ಯಾಂಡಲ್ವುಡ್ ನಟಿಯ ಬಾಲ್ಯದ ಜಾಹೀರಾತೊಂದರ ಫೋಟೋ...ಈಕೆಯ ಗುರುತು ಸಿಕ್ತಾ...? - ಬಾಲ್ಯದ ಫೋಟೋ ಹಂಚಿಕೊಂಡ ಸುಧಾರಾಣಿ
ಲಾಕ್ಡೌನ್ ದಿನಗಳನ್ನು ಪತಿ ಹಾಗೂ ಪುತ್ರಿಯೊಂದಿಗೆ ಎಂಜಾಯ್ ಮಾಡುತ್ತಿರುವ ನಟಿ ಸುಧಾರಾಣಿ ತಾವು ಬಾಲ್ಯದಲ್ಲಿದ್ದಾಗ ನಟಿಸಿದ್ದ ಜಾಹೀರಾತೊಂದರ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ನಟಿ ಸುಧಾರಾಣಿ ಕೂಡಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಾಲ್ಯದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಇದು ಕುಟುಂಬದ ಜೊತೆ ಇರುವ ಫೋಟೋವಲ್ಲ. ತಾವು ರಿಫೈಂಡ್ ಆಯಿಲ್ ಜಾಹೀರಾತೊಂದರಲ್ಲಿ ನಟಿಸಿದ್ದಾಗ ಕ್ಲಿಕ್ಕಿಸಿದ್ದ ಪೋಟೋ ಇದು. ಈ ಸುಂದರ ಪೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸುಧಾರಾಣಿ. 'ನನ್ನ ಮಾಡೆಲಿಂಗ್ ದಿನಗಳಲ್ಲಿ ಕ್ಲಿಕ್ ಮಾಡಿದ ಫೋಟೋ. ನನಗೆ ಈ ಫೋಟೋ ಎಂದರೆ ಬಹಳ ಇಷ್ಟ. ನನ್ನನ್ನು ಆಗ ಎಲ್ಲರೂ ಬಹಳ ಮುದ್ದಿಸುತ್ತಿದ್ದರು. ಚಾಕೊಲೇಟ್ಸ್ , ಐಸ್ಕ್ರೀಮ್ ಹಾಗೂ ಗೊಂಬೆಗಳನ್ನು ತಂದುಕೊಡುತ್ತಿದ್ದರು. ಇದು ನಿಜಕ್ಕೂ ಸುಂದರ ನೆನಪು' ಎಂದು ಬರೆದುಕೊಂಡಿದ್ದಾರೆ.
ತಮ್ಮ 3ನೇ ವಯಸ್ಸಿಗೆ ಬಿಸ್ಕೆಟ್ ಬ್ರಾಂಡ್ ಒಂದರ ಜಾಹೀರಾತಿನಲ್ಲಿ ನಟಿಸುವ ಮೂಲಕ ಮಾಡೆಲಿಂಗ್ ಆರಂಭಿಸಿದ ಸುಧಾರಾಣಿ, ಬಾಲನಟಿಯಾಗಿ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲ ತಮಿಳು, ಮಲಯಾಳಂ, ತುಳು ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡಾ ಸುಧಾರಾಣಿ ನಟಿಸಿದ್ದಾರೆ. 1986 ರಲ್ಲಿ 12 ನೇ ವಯಸ್ಸಿನಲ್ಲೇ ಶಿವರಾಜ್ಕುಮಾರ್ ಅಭಿನಯದ 'ಆನಂದ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು. ತಮ್ಮ ನಟನೆಗೆ ಸಾಕಷ್ಟು ಪ್ರಶಸ್ತಿಗಳನ್ನೂ ಕೂಡಾ ಪಡೆದಿರುವ ಸುಧಾರಾಣಿ ಭರತನಾಟ್ಯ ಕಲಾವಿದೆ ಕೂಡಾ. ಸದ್ಯಕ್ಕೆ ಪತಿ ಗೋವರ್ಧನ್ ಹಾಗೂ ಪುತ್ರಿ ನಿಧಿಯೊಂದಿಗೆ ಸುಧಾರಾಣಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.