ಕರ್ನಾಟಕ

karnataka

ETV Bharat / sitara

ಸಿಬಿಎಸ್‌ಸಿ ರಿಸಲ್ಟ್​ನಲ್ಲಿ ಸುಧಾರಾಣಿ ಪುತ್ರಿ ಅಪ್ರತಿಮ ಸಾಧನೆ... ಸುಬ್ಬಿಕುಟ್ಟಿ ಸಾಧನೆಯಿಂದ ಫುಲ್​ ಖುಷ್​ - undefined

ಪಿಯುಸಿ ಸಿಬಿಎಸ್​ಸಿ ಫಲಿತಾಂಶ ಪ್ರಕಟವಾಗಿದ್ದು ನಟಿ ಸುಧಾರಾಣಿ ಪುತ್ರಿ 96.4% ಅಂಕ ಗಳಿಸುವ ಮೂಲಕ ಕಾಲೇಜಿಗೆ ಎರಡನೇ ರ್‍ಯಾಂಕ್ ಗಳಿಸಿದ್ದಾರೆ. ಮಗಳ ಸಾಧನೆಗೆ ಸುಧಾರಾಣಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಸುಧಾರಾಣಿ

By

Published : May 3, 2019, 1:23 PM IST

Updated : May 3, 2019, 2:03 PM IST

ಸೆಲಬ್ರಿಟಿಗಳ ಹಾಗೂ ಸಾಮಾನ್ಯ ಜನರ ಜೀವನಶೈಲಿಯಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಎಲ್ಲಾ ತಂದೆ-ತಾಯಿಗಳೂ ಒಂದೇ. ತಮ್ಮ ಮಕ್ಕಳು ವಿದ್ಯಾವಂತರಾಗಿ ಒಳ್ಳೆ ಉದ್ಯೋಗ ಪಡೆದು ಸಂತೋಷವಾಗಿರಬೇಕೆಂಬುದೇ ಪೋಷಕರ ಆಸೆ.

ಪುತ್ರಿಯೊಂದಿಗೆ ಸುಧಾರಾಣಿ, ಗೋವರ್ಧನ್

ನಿನ್ನೆಯಷ್ಟೇ ಪಿಯುಸಿ ಸಿಬಿಎಸ್​​ಸಿ ರಿಸಲ್ಟ್ ಬಂದಿದೆ. ರಾಜ್ಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಒಳ್ಳೆಯ ಅಂಕ ಪಡೆದು ತಮ್ಮ ಮುಂದಿನ ದಾರಿ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ. ಸ್ಯಾಂಡಲ್​ವುಡ್ ನಟಿ ಸುಧಾರಾಣಿ ಪುತ್ರಿ ನಿಧಿ ಕೂಡಾ ಒಳ್ಳೆಯ ಅಂಕ ಪಡೆದು ಕಾಲೇಜಿಗೂ , ತಂದೆ-ತಾಯಿಗೂ ಕೀರ್ತಿ ತಂದಿದ್ದಾರೆ. ನಿಧಿ 96.4% ಮಾರ್ಕ್ಸ್ ಪಡೆಯುವ ಮೂಲಕ ಪೋಷಕರ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ. ಇಡೀ ಕಾಲೇಜಿಗೆ ನಿಧಿ ಎರಡನೇ ಸ್ಥಾನ ಗಳಿಸಿದ್ದಾರೆ.

ಈ ಸಂತಸವನ್ನು ಸುಧಾರಾಣಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ನನ್ನ ಜೀವನದ ತುಂಬಾ ಸಂತೋಷದ ಸಮಯ. ಸುಬ್ಬಿಕುಟ್ಟಿ (ಮನೆಯಲ್ಲಿ ಪ್ರೀತಿಯಿಂದ ಕರೆಯುವ ಹೆಸರು) 12ನೇ ತರಗತಿ ಸಿಬಿಎಸ್ಇ ಪರೀಕ್ಷೆಯಲ್ಲಿ 96.4% ಪಡೆದು ಶಾಲೆಗೆ ಎರಡನೇ ರ್‍ಯಾಂಕ್ ಪಡೆದಿದ್ದಾಳೆ‌ ಎಂದು ಮಗಳ ಸಾಧನೆಯನ್ನು ಕೊಂಡಾಡಿದ್ದಾರೆ. ಸುಧಾರಾಣಿ ಮತ್ತು ಪತಿ ಗೋವರ್ಧನ್ ಇಬ್ಬರೂ ಮಗಳನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಲವ್ಲಿಸ್ಟಾರ್ ಪ್ರೇಮ್ ಪುತ್ರಿ ಕೂಡಾ ದ್ವಿತೀಯ ಪಿಯುಸಿ ನಲ್ಲಿ 94% ಪರ್ಸೆಂಟ್ ಅಂಕ ಗಳಿಸಿದ್ದರು.

ಸುಧಾರಾಣಿ, ನಿಧಿ
Last Updated : May 3, 2019, 2:03 PM IST

For All Latest Updates

TAGGED:

ABOUT THE AUTHOR

...view details