ಸ್ಯಾಂಡಲ್ವುಡ್ ಹಿರಿಯ ನಟಿ ಸುಧಾರಾಣಿ ಅವರ ತಂದೆ ಹೆಚ್.ಎಸ್. ಗೋಪಾಲಕೃಷ್ಣ (93) ಶುಕ್ರವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ನಟಿ ಸುಧಾರಾಣಿಗೆ ಪಿತೃ ವಿಯೋಗ - ನಟಿ ಸುಧಾರಾಣಿಗೆ ಪಿತೃವಿಯೋಗ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಸುಧಾರಾಣಿ ಅವರ ತಂದೆ ಹೆಚ್.ಎಸ್. ಗೋಪಾಲಕೃಷ್ಣ ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
![ನಟಿ ಸುಧಾರಾಣಿಗೆ ಪಿತೃ ವಿಯೋಗ actress sudharani father passes away](https://etvbharatimages.akamaized.net/etvbharat/prod-images/768-512-10259799-581-10259799-1610773230016.jpg)
ನಟಿ ಸುಧಾರಾಣಿಗೆ ಪಿತೃವಿಯೋಗ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಂದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಬಗ್ಗೆ ಸುಧಾರಾಣಿ ತಿಳಿಸಿದ್ದಾರೆ.
ಬಂಧು-ಮಿತ್ರರ ಸಮ್ಮುಖದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಹರಿಶ್ಚಂದ್ರ ಘಾಟ್ನಲ್ಲಿ ಗೋಪಾಲಕೃಷ್ಣ ಅವರ ಅಂತ್ಯಕ್ರಿಯೆ ನಡೆಯಲಿದೆ.