ಕರ್ನಾಟಕ

karnataka

ETV Bharat / sitara

ಮಾಳವಿಕಾ ಮನೆಗೆ ಕೇಕ್​​​ನೊಂದಿಗೆ ಸುಧಾರಾಣಿ-ಶೃತಿ ಎಂಟ್ರಿ​.. ಸ್ನೇಹಿತೆಯರ ಸರ್ಪ್ರೈಸ್​ಗೆ ನಟಿ ಫುಲ್ ​ಖುಷ್​ - ಮಾಳವಿಕಾ ಮನೆಗೆ ಸುಧಾರಾಣಿ ಶೃತಿ ಭೇಟಿ

ನಿನ್ನೆ ಮಾಳವಿಕಾ ಅವಿನಾಶ್ ಅವ್ರ ಹುಟ್ಟಿದ ದಿನ. ರಾಜಾರಾಜೇಶ್ವರಿ ನಗರದಲ್ಲಿರುವ ಮಾಳವಿಕಾ ಅವಿನಾಶ್ ಮನೆಗೆ ಸುಧಾರಾಣಿ ಹಾಗೂ ಶೃತಿ ಬರ್ತ್ ಡೇ ಕೇಕ್​ನೊಂದಿಗೆ ಅವರ ಮನೆಗೆ ಹೋಗಿದ್ದಾರೆ. ಸ್ನೇಹಿತೆಯರು ಬರುವ ವಿಚಾರ ಸ್ವತಃ ಮಾಳವಿಕಾಗೆ ತಿಳಿದಿರಲಿಲ್ಲ..

Actress Sudharani and Shruthi give surprise to malavika
ಮಾಳವಿಕಾ ಮನೆಗೆ ಸುಧಾರಾಣಿ ಶೃತಿ ಭೇಟಿ

By

Published : Jan 29, 2022, 7:04 PM IST

ಕನ್ನಡ ಚಿತ್ರರಂಗದಲ್ಲಿ 90ರ ದಶಕದಲ್ಲಿ ಬೆಳ್ಳಿ ತೆರೆ ಮೇಲೆ ಮಿಂಚಿದ ಸುಧಾರಾಣಿ ಮತ್ತು ಶೃತಿ ಹಾಗೂ ಮಾಳವಿಕಾ ಉತ್ತಮ ಗೆಳೆತನ ಹೊಂದಿದ್ದಾರೆ. ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಮಾಳವಿಕಾ ಅವಿನಾಶ್​ಗೆ ಸುಧಾರಾಣಿ ಮತ್ತು ಶೃತಿ ಸರ್ಪ್ರೈಸ್​ ನೀಡಿದ್ದಾರೆ.

ಮಾಳವಿಕಾ ಮನೆಗೆ ಸುಧಾರಾಣಿ ಶೃತಿ ಭೇಟಿ

ಈ ಮೂರು ಜನ ನಟಿಮಣಿಯರು ಕೆಲವು ದಿನಗಳ ಹಿಂದೆ ಲೀಲಾವತಿ ಅವರ ಆರೋಗ್ಯ ವಿಚಾರಿಸಿ ಗಮನ ಸೆಳೆದಿದ್ದರು. ಇದೀಗ ಮಾಳವಿಕಾ ಅವಿನಾಶ್ ಹುಟ್ಟು ಹಬ್ಬಕ್ಕೆ ನಟಿ ಸುಧಾರಾಣಿ ಹಾಗೂ ಶೃತಿ ಅವರು ಮಾಳವಿಕಾರ ಮನೆಗೆ ಬಂದು ಸರ್ಪ್ರೈಸ್​ ನೀಡಿದ್ದಾರೆ.

ಇದನ್ನೂ ಓದಿ:ಫೋರ್ ವಾಲ್ಸ್ ಚಿತ್ರದ ಪ್ರೀತಿ ನಿವೇದನೆ ಹಾಡಿನಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್!

ನಿನ್ನೆ ಮಾಳವಿಕಾ ಅವಿನಾಶ್ ಅವ್ರ ಹುಟ್ಟಿದ ದಿನ. ರಾಜಾರಾಜೇಶ್ವರಿ ನಗರದಲ್ಲಿರುವ ಮಾಳವಿಕಾ ಅವಿನಾಶ್ ಮನೆಗೆ ಸುಧಾರಾಣಿ ಹಾಗೂ ಶೃತಿ ಬರ್ತ್ ಡೇ ಕೇಕ್​ನೊಂದಿಗೆ ಅವರ ಮನೆಗೆ ಹೋಗಿದ್ದಾರೆ. ಸ್ನೇಹಿತೆಯರು ಬರುವ ವಿಚಾರ ಸ್ವತಃ ಮಾಳವಿಕಾಗೆ ತಿಳಿದಿರಲಿಲ್ಲ.

ಅವ್ರ ಮನೆಯಲ್ಲಿ ಕೇಕ್ ಇಟ್ಟು ಬಳಿಕ ಸುಧಾರಾಣಿ ಹಾಗೂ ಶೃತಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ನಂತರ ಮಾಳವಿಕಾ ಸ್ನೇಹಿತೆಯರ ಜೊತೆಗೂಡಿ ಕೇಕ್​ ಕತ್ತರಿಸಿದ್ದಾರೆ. ಈ ಸುಂದರ ಕ್ಷಣದ ವಿಡಿಯೋವನ್ನು ಸುಧಾರಾಣಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details