ಬೇಸಿಗೆ ಬಂದರೆ ಸಾಕು ಎಲ್ಲಾದರೂ ಕೂಲ್ ಇರುವ ಪ್ರದೇಶಕ್ಕೆ ಒಂದು ಟ್ರಿಪ್ ಹೋಗಿ ಬರೋಣ ಎಂದು ಎಲ್ಲರೂ ಪ್ಲ್ಯಾನ್ ಮಾಡುತ್ತಾರೆ. ಅದರಲ್ಲೂ ಸೆಲಬ್ರಿಟಿಗಳಂತೂ ಗ್ಯಾಪಲ್ಲಿ ಒಂದು ಟ್ರಿಪ್ ಎನ್ನುವಂತೆ ಸ್ವಲ್ಪ ಬಿಡುವು ಸಿಕ್ಕರೆ ಸಾಕು ವಿದೇಶಕ್ಕೆ ಹಾರುತ್ತಾರೆ.
ಭೂತಾನ್ನಲ್ಲಿ ಬೇಸಿಗೆ ಎಂಜಾಯ್ ಮಾಡುತ್ತಿರುವ ಸೋನುಗೌಡ - undefined
'ಗುಳ್ಟು' ನಾಯಕಿ ಸೋನುಗೌಡ ಭೂತಾನ್ ಪ್ರವಾಸದಲ್ಲಿದ್ದಾರೆ. ತನ್ನ ಸ್ನೇಹಿತೆಯೊಂದಿಗೆ ಟ್ರಿಪ್ ಎಂಜಾಯ್ ಮಾಡುತ್ತಿರುವ ಸೋನುಗೌಡ ಉಪೇಂದ್ರ ಜೊತೆ 'ಐ ಲವ್ ಯು' ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ಧಾರೆ.

ಸೋನುಗೌಡ ಭೂತಾನ್ ಪ್ರವಾಸ
ಸೋನುಗೌಡ ಭೂತಾನ್ ಪ್ರವಾಸ
'ಗುಳ್ಟು' ಬೆಡಗಿ ಸೋನುಗೌಡ ಇದೀಗ ಭೂತಾನ್ ಪ್ರವಾಸದಲ್ಲಿದ್ದಾರೆ. ಸ್ನೇಹಿತೆಯೊಂದಿಗೆ ಭೂತಾನ್ ತೆರಳಿರುವ ಸೋನು ಅಲ್ಲಿನ ಸುಂದರ ತಾಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. 'ಗುಳ್ಟು' ಸಿನಿಮಾದ ಬಳಿಕ ಸಖತ್ ಬ್ಯುಸಿ ಇರುವ ಸೋನು ಶೂಟಿಂಗ್ ಬ್ಯುಸಿ ನಡುವೆಯೂ ಭೂತಾನ್ಗೆ ತೆರಳಿ 7 ದಿನಗಳಿಂದ ಅಲ್ಲೇ ಉಳಿದುಕೊಂಡಿದ್ದಾರೆ. ಅಲ್ಲಿ ತೆಗೆಸಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸೋನು ಷೇರ್ ಮಾಡಿದ್ಧಾರೆ.
ಸದ್ಯಕ್ಕೆ ಸೋನು ಐ ಲವ್ ಯು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಇದರೊಂದಿಗೆ ಶಾಲಿನಿ ಐಪಿಎಸ್ ಚಿತ್ರದ ಶೂಟಿಂಗ್ನಲ್ಲೂ ಅವರು ಬ್ಯುಸಿಯಿದ್ದಾರೆ.