ಸ್ಯಾಂಡಲ್ವುಡ್ ನಟಿ ಶೃತಿ ಹರಿಹರನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಮನೆಗೆ ಪುಟ್ಟ ಅತಿಥಿಯ ಆಗಮನಕ್ಕೆ ಎದುರು ನೋಡುತ್ತಿದ್ದಾರೆ.
ಸೀಮಂತ ಸಂಭ್ರಮದಲ್ಲಿ ನಟಿ ಶೃತಿ ಹರಿಹರನ್ - undefined
ಶೃತಿ ಹರಿಹರನ್ ತಾಯ್ತನದ ದಿನಗಳನ್ನು ಎಂಜಾಯ್ ಮಾಡ್ತಿದ್ದು, ಸಂಭ್ರಮದಿಂದ ಸೀಮಂತ ಕಾರ್ಯ ಮಾಡಿಸಿಕೊಂಡಿದ್ದಾರೆ.
ಮೊನ್ನೆಯಷ್ಟೆ 'ತಾನು ಗರ್ಭವತಿ' ಎಂದು ಸಿಹಿ ಸುದ್ದಿ ನೀಡಿದ್ದ ಶೃತಿ, ಈಗ ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಗೌನ್ನಲ್ಲಿ ಶ್ರುತಿ ಮಿಂಚಿದ್ದಾರೆ. ಕೇಕ್ ಕತ್ತರಿಸಿ ಸ್ನೇಹಿತರೊಂದಿಗೆ ಸಂಭ್ರಮಿಸಿದ್ದಾರೆ. ಬೇಬಿ ಬಂಪ್ ಶವರ್ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಈ ಸುಂದರ ಕ್ಷಣಗಳ ಪಟಗಳ ಸ್ಲೈಡ್ಶೋ ವಿಡಿಯೋ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಸ್ನೇಹಿತರು ಹಾಗೂ ಕುಟುಂಬದವರಿಗೆ ಧನ್ಯವಾದ ಹೇಳಿದ್ದಾರೆ.
ಇನ್ನು ರಾಮ್‌ಕುಮಾರ್ ಅವರ ಜತೆ ಶ್ರುತಿ ಮದುವೆಯಾಗಿರುವ ವಿಚಾರ ಕಳೆದ ವರ್ಷವಷ್ಟೆ ಬಹಿರಂಗವಾಗಿತ್ತು. ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪದ ದೂರಿನ ಪ್ರತಿಯಲ್ಲಿ ತಮ್ಮ ಪತಿಯ ಹೆಸರು ಬರೆದ ನಂತರವೇ ಶೃತಿಯ ದಾಂಪತ್ಯ ಜೀವನದ ಗುಟ್ಟುರಟ್ಟಾಗಿತ್ತು.