ಕರ್ನಾಟಕ

karnataka

ETV Bharat / sitara

ಮಾತೃಶ್ರೀ‌ ಮನೋವಿಕಾಸ ಕೇಂದ್ರದಿಂದ ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ - ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ

ಬೈಟು ಲವ್ ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರೋ ಶ್ರೀಲೀಲಾಗೆ ಆ ಮಗುವಿನೊಂದಿಗೆ ಒಂದು ಬಂಧ ಬೆಸೆದಿತ್ತು. ಮಾತೃಶ್ರೀ‌ ಮನೋವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ನು ಕಂಡೊಡನೆ ಶ್ರೀಲೀಲಾ ಭಾವುಕರಾದ್ರು. ಜೊತೆಗೆ ಇಬ್ಬರು ಮಕ್ಕಳನ್ನು ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ, ಸ್ಫೂರ್ತಿ ತುಂಬಿದ್ದಾರೆ..

actress shreeleela  adopt two blind children
ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ

By

Published : Feb 12, 2022, 4:45 PM IST

ಕನ್ನಡ ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡಿ ತನ್ನದೇ ಐಡೆಂಟಿಟಿ ಹೊಂದಿರುವ ನಟಿ ಶ್ರೀಲೀಲಾ ಅವರ ಬೈಟು ಲವ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶ್ರೀಲೀಲಾ ರಿಯಲ್ ಲೈಫ್​ನಲ್ಲೂ ಹೀರೋಯಿನ್ ಆಗಿದ್ದಾರೆ.

ನಟಿ ಶ್ರೀಲೀಲಾ ಮಾತೃಶ್ರೀ‌ ಮನೋವಿಕಾಸ ಕೇಂದ್ರದಿಂದ, ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ. 8 ತಿಂಗಳ ಮಗು ಗುರು ಹಾಗೂ ಶೋಭಿತ ಅನ್ನೋ ಹೆಣ್ಣು ಮಗಳನ್ನು ದತ್ತು ಪಡೆದಿದ್ದಾರೆ.

ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ..

ಬೈಟು ಲವ್ ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರೋ ಶ್ರೀಲೀಲಾಗೆ ಆ ಮಗುವಿನೊಂದಿಗೆ ಒಂದು ಬಂಧ ಬೆಸೆದಿತ್ತು. ಮಾತೃಶ್ರೀ‌ ಮನೋವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ನು ಕಂಡೊಡನೆ ಶ್ರೀಲೀಲಾ ಭಾವುಕರಾದ್ರು. ಜೊತೆಗೆ ಇಬ್ಬರು ಮಕ್ಕಳನ್ನು ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ, ಸ್ಫೂರ್ತಿ ತುಂಬಿದ್ದಾರೆ.

ಇದನ್ನೂ ಓದಿ:ಹ್ಯಾಪಿ ಮೂಡ್​ನಲ್ಲಿ ಶೆಹನಾಜ್​ ಗಿಲ್​​.. ಪಾರಿವಾಳಗಳಂತೆ ಹಾರ ಬಯಸುತ್ತೇನೆಂದ ನಟಿ

ಈ ವೇಳೆ ಬೈಟು ಲವ್ ಚಿತ್ರದ ನಿರ್ದೇಶಕ‌ ಹರಿ ಸಂತು ಶ್ರೀಲೀಲಾ ಅವ್ರಿಗೆ ಸಾಥ್ ನೀಡಿದ್ರು. ಶ್ರೀಲೀಲಾ ಅಭಿನಯದ ಬೈಟು ಲವ್ ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದೆ.

ಈ‌ ಸಿನಿಮಾ ಇವತ್ತಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದೆಯಂತೆ. ಅಂಥ ವಿಶೇಷ ವಿಚಾರಗಳು ಚಿತ್ರದಲ್ಲಿವೆ ಅಂತಿದ್ದಾರೆ ಶ್ರೀಲೀಲಾ. ಬೈಟು ಲವ್ ಚಿತ್ರ ಇದೇ ತಿಂಗಳ 18ಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.

ABOUT THE AUTHOR

...view details