ಕರ್ನಾಟಕ

karnataka

ETV Bharat / sitara

ತಮ್ಮ ಕುರಿತಾದ ಸಿನಿಮಾ ಟ್ರೇಲರ್​​​​​ ಬಿಡುಗಡೆ ಸಮಾರಂಭದಲ್ಲಿ ಬೇಸರ ಹೊರ ಹಾಕಿದ ಶಕೀಲಾ - Indrajit Lankesh direction film

'ಶಕೀಲಾ' ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟಿ ಶಕೀಲಾ, ಕಾರ್ಯಕ್ರಮಕ್ಕೆ ತಮ್ಮ ಕುಟುಂಬದ ಸದಸ್ಯರು ಬಾರದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದು ನನ್ನ ಜೀವನದ ಮಹತ್ವದ ಘಟನೆಗಳನ್ನು ಆಧರಿಸಿ ತಯಾರಾದ ಸಿನಿಮಾ. ಆದರೆ ಸಂತೋಷ ಹಂಚಿಕೊಳ್ಳಲು ಯಾರೂ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Actress Shakeela
ಶಕೀಲಾ

By

Published : Dec 7, 2020, 2:07 PM IST

ಮಲಯಾಳಂ ನಟಿ ಶಕೀಲಾ ಜೀವನದ ಪ್ರಮುಖ ಘಟನೆಗಳನ್ನು ಆಧರಿಸಿ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ತಯಾರಾದ 'ಶಕೀಲಾ' ಸಿನಿಮಾ ಡಿಸೆಂಬರ್ 25, ಕ್ರಿಸ್​​ಮಸ್ ದಿನದಂದು ಬಿಡುಗಡೆಯಾಗುತ್ತಿದೆ. ಇಂದು ಚಿತ್ರದ ಟ್ರೇಲರ್ ಹಾಗೂ ಫಸ್ಟ್​​ಲುಕ್ ಬಿಡುಗಡೆಯಾಗಿದೆ. ಆದರೆ ಶಕೀಲಾ ಇದರಿಂದ ಖುಷಿಯಾಗಿಲ್ಲವಂತೆ.

'ಶಕೀಲಾ' ಟ್ರೇಲರ್​​​​​ ಬಿಡುಗಡೆ ಸಮಾರಂಭ

ಸಮಾರಂಭಕ್ಕೆ ತಮ್ಮ ಕುಟುಂಬದ ಯಾರೂ ಹಾಜರಾಗದಿರುವುದು ಶಕೀಲಾ ಬೇಸರಕ್ಕೆ ಕಾರಣವಾಗಿದೆ. ಈ ಕುರಿತು ಮಾತನಾಡಿರುವ ಅವರು, 'ನನ್ನ ಬಯೋಪಿಕ್​ ಕುರಿತಾದ ಸಮಾರಂಭ ನಡೆಯುತ್ತಿದೆ. ನನ್ನ ಪಾಲಿಗೆ ಇಂದು ಮಹತ್ವದ ದಿನ. ಆದರೆ, ಬೇಸರದ ಸಂಗತಿಯೆಂದರೆ, ನನ್ನ ಕುಟುಂಬದ ಯಾರೂ ಇಂದು ಕಾರ್ಯಕ್ರಮಕ್ಕೆ ಬಂದಿಲ್ಲ. ಇಲ್ಲಿ ಬಂದಿರುವವರೇ ನನ್ನ ಕುಟುಂಬದವರು. ನಾನಿನ್ನೂ ಬದುಕಿದ್ದೇನೆ ಮತ್ತು ನನ್ನ ಜೀವನದ ಕುರಿತು ಒಂದು ಸಿನಿಮಾ ಬರುತ್ತಿದೆ ಎನ್ನುವುದೇ ನನ್ನ ಪಾಲಿಗೆ ಖುಷಿಯ ವಿಚಾರ' ಎಂದು ಬೇಸರದಿಂದಲೇ ಹೇಳಿಕೊಂಡಿದ್ದಾರೆ.

ಇಂದ್ರಜಿತ್ ಲಂಕೇಶ್, ಶಕೀಲಾ

ಇಂದ್ರಜಿತ್​ ಅವರಿಗೂ ಮುನ್ನ ನಿರ್ದೇಶಕಿಯೊಬ್ಬರು ಶಕೀಲಾ ಕುರಿತು ಸಿನಿಮಾ ಮಾಡಲು ಮುಂದೆ ಬಂದಿದ್ದರಂತೆ. ಆದರೆ, ಅವರಿಗೆ ಅನುಮತಿ ನೀಡದೆ ಇಂದ್ರಜಿತ್​ಗೆ ಅನುಮತಿ ನೀಡಿದ್ದಾರೆ ಶಕೀಲಾ. 'ಇಂದ್ರಜಿತ್​ ನಿರ್ದೇಶನದ 'ಲವ್​ ಯೂ ಆಲಿಯಾ' ಚಿತ್ರದಲ್ಲಿ ನಟಿಸುವಾಗ, ನನ್ನ ಬಯೋಪಿಕ್​ ಮಾಡುವುದಕ್ಕೆ ಒಬ್ಬರು ಮುಂದೆ ಬಂದಿದ್ದರು. ಅಷ್ಟರಲ್ಲಿ ಇಂದ್ರಜಿತ್​ಗೆ ವಿಷಯ ತಿಳಿದು ಅವರೇ ಚಿತ್ರ ಮಾಡುತ್ತೇನೆ ಎಂದರು. ಈ ವಿಷಯ ಕೇಳಿ ಖುಷಿಯಾಯಿತು. ಬಹುಶಃ ಆ ನಿರ್ದೇಶಕಿ ಚಿತ್ರ ಮಾಡಿದ್ದರೆ, ಚಿತ್ರ ಹಸಿಹಸಿಯಾಗಿರುತಿತ್ತು. ಆದರೆ, ಇಂದ್ರಜಿತ್​ ಇದನ್ನು ಕಮರ್ಷಿಯಲ್​ ಆಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮನರಂಜನಾತ್ಮಕವಾಗಿ ಮಾಡಿದ್ದಾರೆ' ಎಂದು ಹೇಳುವ ಮೂಲಕ ಇಂದ್ರಜಿತ್ ಅವರನ್ನು ಹೊಗಳಿದ್ದಾರೆ.

ABOUT THE AUTHOR

...view details