ಬೆಂಗಳೂರು: ಐಷರಾಮಿ ಕಾರಿನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಾ ನಟಿ ಸಂಜನಾ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ.
ವಿಸ್ಕಿ ಗಲಾಟೆ ನಂತರ ಮತ್ತೆ ವಿವಾದದಲ್ಲಿ ಸಂಜನಾ... ಕಾರು ಚಲಾಯಿಸುತ್ತಲೇ ಸೆಲ್ಫಿ ವಿಡಿಯೋ - Actress Sanjana break the traffic rules
ಐಷರಾಮಿ ಕಾರಿನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಾ ನಟಿ ಸಂಜನಾ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ.

ಕನ್ನಡ ಹಾಗೂ ತೆಲುಗು ಸೇರಿದಂತೆ ವಿವಿಧ ಭಾಷೆಯಲ್ಲಿ ನಟಿಸಿರುವ ಸಂಜನಾ, ಇತ್ತೀಚೆಗೆ ಹೋಟೆಲ್ವೊಂದರಲ್ಲಿ ನಿರ್ಮಾಪಕಿ ವಂದನಾ ಜೈನ್ನೊಂದಿಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಂದು ತೆಲುಗು ನಟ ಮಹೇಶ್ ಬಾಬು ಅಭಿನಯದ ಸಿನಿಮಾ ವೀಕ್ಷಣೆಗೆ ತೆರಳುತ್ತಿದಾಗ ಸೆಲ್ಫಿ ವಿಡಿಯೋ ಮಾಡುತ್ತಾ, ಕೆಂಪೇಗೌಡ ರಸ್ತೆಯಲ್ಲಿ ಕಾರು ಚಲಾಯಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಡ್ರೈವಿಂಗ್ನಲ್ಲಿ ಮೊಬೈಲ್ ಬಳಸಿ, ಟ್ರಾಫಿಕ್ ಪೊಲೀಸರಿಗೆ ಮೊದಲ ಬಾರಿ ಸಿಕ್ಕಿಬಿದ್ದರೆ 1000 ರೂ. ದಂಡ, 2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ 2 ಸಾವಿರ ರೂ. ಹಾಗೂ ಮೂರನೇ ಬಾರಿ ಸಿಕ್ಕಿ ಬಿದ್ದರೆ, ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸು ಮಾಡಿದ್ದಾರೆ.