ಬೆಂಗಳೂರು: ನಟಿ ಸಂಜನಾ ಗರ್ಲಾನಿ ಆಪ್ತ ರಾಹುಲ್ ಸಿಸಿಬಿಗೆ ಬಲೆಗೆ ಬಿದ್ದಿದ್ದು, ಸಂಜನಾಗೂ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗ್ತಿದಂತೆ, ಸಂಜನಾ ದೇವಸ್ಥಾನಗಳ ಭೇಟಿ ಶುರುಮಾಡಿದ್ದಾರೆ.
ಸಿಸಿಬಿ ಖೆಡ್ಡಾಗೆ ಬಿದ್ದ ಸಂಜನಾ ಆಪ್ತ ರಾಹುಲ್, ಟೆಂಪಲ್ ರನ್ ಶುರು ಮಾಡಿದ ಗರ್ಲಾನಿ - ಇಂದಿರಾನಗರದಲ್ಲಿರುವ ಸಾಯಿ ತೇಜಸ್ವಿ ಅಪಾರ್ಟ್ ಮೇಂಟ್
ಇಂದಿರಾನಗರದಲ್ಲಿರುವ ಅಪಾರ್ಟ್ಮೆಂಟ್ ನಲ್ಲೇ ಕುಳಿತು ಆಪ್ತರಿಂದ ಮಾಹಿತಿ ಕಲೆ ಹಾಕ್ತಿದ್ದ ನಟಿ ಸಂಜನಾ ಈ ಗ್ಯಾಪ್ ನಲ್ಲಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳ್ಳಂಬೆಳಗ್ಗೆಯೇ ಮಾಧ್ಯಮದವರ ಮೇಲೆ ಕಿರುಚಾಡಿದ ಸಂಜನಾಗೆ, ಸ್ನೇಹಿತ ರಾಹುಲ್ ಸಿಸಿಬಿ ಬಲೆಗೆ ಸಿಲುಕಿದ ಬೆನ್ನಲ್ಲೇ ಟೆನ್ಷನ್ ಶುರುವಾಗಿದೆ.
ನಿನ್ನೆಯಿಂದ ಬೆಂಗಳೂರಿನಲ್ಲೇ ಇದ್ದು, ಕಣ್ಣಾ ಮುಚ್ಚಾಲೆ ಆಡುತ್ತಿರುವ ಗಂಡ ಹೆಂಡತಿ ಬೆಡಗಿ ಇಂದಿರಾನಗರದಲ್ಲಿರುವ ಸಾಯಿ ತೇಜಸ್ವಿ ಅಪಾರ್ಟ್ಮೆಂಟ್ ನಲ್ಲೇ ಕೂತು ಆಪ್ತರಿಂದ ಮಾಹಿತಿ ಕಲೆ ಹಾಕ್ತಿದ್ದು. ಈ ಗ್ಯಾಪ್ ನಲ್ಲಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳ್ಳಂಬೆಳಗ್ಗೆಯೇ ಮಾಧ್ಯಮದವರ ಮೇಲೆ ಕಿರುಚಾಡಿದ ಸಂಜನಾಗೆ, ಸ್ನೇಹಿತ ರಾಹುಲ್ ಸಿಸಿಬಿ ಬಲೆಗೆ ಸಿಲುಕಿದ ಬೆನ್ನಲ್ಲೇ ಟೆನ್ಷನ್ ಶುರುವಾಗಿದೆ.
ಅಲ್ಲದೆ ನಿನ್ನೆ ಸಂಜನಾ ಪ್ರಶಾಂತ್ ಸಂಬರಗಿ ಬಗ್ಗೆ ಗರಂ ಆಗಿದ್ದು, ನನ್ನ ಬಗ್ಗೆ ಪ್ರಶ್ನೆ ಮಾಡೊದಕ್ಕೆ ಪ್ರಶಾಂತ್ ಸಂಬರಗಿ ಯಾರು..? ನಾನು ಬೀದಿ ನಾಯಿಗೆ ಕೊಡುವಷ್ಟು ಬೆಲೆಯನ್ನ ಅವನಿಗೆ ಕೊಡುವುದಿಲ್ಲ. ನಾನು ಐವತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಅದೆಲ್ಲಾ ಅವನ ಕಣ್ಣಿಗೆ ಕಾಣಿಸುವುದಿಲ್ವಾ. ಪ್ರಶಾಂತ್ ಸಂಬರಗಿ ಹಂದಿ, ಸ್ಯಾಂಡಲ್ವುಡ್ ಹೆಸರನ್ನ ಹಾಳು ಮಾಡುತ್ತಿದ್ದಾನೆ. 12 ವರ್ಷಗಳ ನನ್ನ ಸಿನಿಮಾ ಜರ್ನಿಯಲ್ಲಿ ಇದನ್ನೆಲ್ಲಾ ಸಂಪಾದನೆ ಮಾಡಿದ್ದೇನೆ. ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್, ಪವನ್ ಕಲ್ಯಾಣ್, ದರ್ಶನ್, ಸುದೀಪ್, ಶಿವಣ್ಣ ಜೊತೆಗೆ ಸಿನಿಮಾ ಮಾಡಿದ್ದೇನೆ ಎಂದು ಸಂಜನಾ ಪ್ರಶಾಂತ್ ಸಂಬರಗಿ ವಿರುದ್ಧ ಗುಡುಗಿದ್ದರು.