ರಾಣ ಸಿನಿಮಾ ಶೀರ್ಷಿಕೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದೆ. ಪಡ್ಡೆಹುಲಿ ಸಿನಿಮಾದಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರುವ ನಟ ಶ್ರೇಯಸ್ ಮಂಜು ಈ ಚಿತ್ರದಲ್ಲಿ ಅಭಿಯಸುತ್ತಿದ್ದಾರೆ. ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗ್ಡೆ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರಂತೆ.
ಪೊಗರು ಸಿನಿಮಾದ ಬಳಿಕ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್-ಕಟ್ ಹೇಳುತ್ತಿರುವ ರಾಣ ಚಿತ್ರ ಹಲವು ವಿಚಾರಗಳಿಂದ ಗಾಂಧಿನಗರದಲ್ಲಿ ಸೌಂಡ್ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈ ಚಿತ್ರದಲ್ಲಿ ಸ್ಪೆಷಲ್ ಹಾಡಿನಲ್ಲಿ ಮಸ್ತ್ ಡ್ಯಾನ್ಸ್ ಮಾಡಿದ್ದರು.
ಇದೀಗ ಶ್ರೇಯಸ್ ಮಂಜು ಜೊತೆ ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗ್ಡೆ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರಂತೆ.
ರಾಣ ಸಿನಿಮಾದಲ್ಲಿ ಹಾಡೊಂದರಲ್ಲಿ ಹೆಜ್ಜೆ ಹಾಕಲಿರುವ ಸಂಯುಕ್ತಾ ಹೆಗ್ಡೆ ಈಗಾಗಲೇ ಕೆಜಿಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್, ಕಂಠೀರವ ಸ್ಟುಡಿಯೋದಲ್ಲಿ ಹಾಡಿನ ಚಿತ್ರೀಕರಣಕ್ಕಾಗಿ ಅದ್ಧೂರಿಯಾದ ಸೆಟ್ ಕೂಡ ಹಾಕಿದ್ದಾರೆ.
ಸಾಹಿತಿ ಶಿವು ಬೇರ್ಗಿ ಈ ಹಾಡನ್ನು ಬರೆದಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದ ಸಂಯುಕ್ತಾ, ರಾಣ ಚಿತ್ರದ ಸಾಂಗ್ವೊಂದರಲ್ಲಿ ಸೊಂಟ ಬಳುಕಿಸಲಿದ್ದಾರೆ.
ನಟ ಶ್ರೇಯಸ್ಗೆ ನಾಯಕಿಯರಾಗಿ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ವಿಶ್ವ, ರವಿವರ್ಮ ಅವರ ಸಾಹಸ ನಿರ್ದೇಶನವಿದೆ.
ರಾಣ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಬಹುತೇಕ ಸಿನಿಮಾದ ಚಿತ್ರೀಕರಣ ಮುಗಿದಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಇದನ್ನೂ ಓದಿ: ಪುನೀತ್ ಸಾರ್ ಜೊತೆ ನಟಿಸುವ ಆಸೆ ಹಾಗೆಯೇ ಉಳಿಯಿತು: ಸೌತ್ ನಟಿ ಪೂರ್ಣ ಬೇಸರ