ಕೊರೊನಾದಿಂದ ಮುಕ್ತಿ ಹೊಂದಲು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಿರ್ದೇಶಕಿ ರೂಪ ಅಯ್ಯರ್ ಹೊಸ ಮಾರ್ಗವೊಂದನ್ನು ಹೇಳಿಕೊಟ್ಟಿದ್ದಾರೆ.
ಕೊರೊನಾ ವೈರಸ್ ತಡೆಯಲು ಹೋಮದಲ್ಲಿ ತೊಡಗಿಕೊಂಡ ನಟಿ , ನಿರ್ಮಾಪಕಿ ರೂಪ ಅಯ್ಯರ್ - ನಟಿ ರೂಪ ಅಯ್ಯರ್
ಕೊರೊನಾ ವಿರುದ್ಧ ಹೋರಾಡಲು ನಟಿ ರೂಪ ಅಯ್ಯರ್ ಸುದರ್ಶನ ಹೋಮದ ಮೊರೆ ಹೋಗಿದ್ದಾರೆ.
![ಕೊರೊನಾ ವೈರಸ್ ತಡೆಯಲು ಹೋಮದಲ್ಲಿ ತೊಡಗಿಕೊಂಡ ನಟಿ , ನಿರ್ಮಾಪಕಿ ರೂಪ ಅಯ್ಯರ್ roopa Iyer](https://etvbharatimages.akamaized.net/etvbharat/prod-images/768-512-6593491-thumbnail-3x2-chai.jpg)
ರೂಪ ಅಯ್ಯರ್
ಸುದರ್ಶನ ಹೋಮ ಮಾಡುತ್ತಿರುವ ರೂಪ ಅಯ್ಯರ್
ಹೌದು, ದೇವರ ಬಗ್ಗೆ ತುಂಬಾನೇ ನಂಬಿಕೆ ಇರುವ ನಟಿ ಕಂ ನಿರ್ದೇಶಕಿ ರೂಪ ಐಯ್ಯರ್ ಐದು ದಿನಗಳ ಕಾಲ ಬೆಳಗಿನ ಜಾವ 3 ಗಂಟೆಗೆ ಎದ್ದು ಸುದರ್ಶನ ಹೋಮವನ್ನು ಮಾಡುತ್ತಿದ್ದಾರೆ.
ಕೊರೊನಾ ವೈರಸ್ ತಡೆಯಲು ರೂಪ ಐಯ್ಯರ್ ಈ ಹೋಮವನ್ನ ಮಾಡುತ್ತಿದ್ದು, ಹಾಗೇ ಸಾರ್ವಜನಿಕರು ಕೂಡ ತಮ್ಮ ಮನೆಯಲ್ಲೇ ಈ ರೀತಿಯ ಹೋಮ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಎಂದು ಹೇಳಿದ್ದಾರೆ.