ಕರ್ನಾಟಕ

karnataka

ETV Bharat / sitara

ಎರಡೂವರೆ ತಿಂಗಳಿಂದ ಚಿಕಿತ್ಸೆ: ನಟಿ ರಿಷಿಕಾ ಸಿಂಗ್ ಚೇತರಿಕೆ

ಸ್ಯಾಂಡಲ್​​​ವುಡ್​​​ನ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ, ನಟಿ ರಿಷಿಕಾ ಸಿಂಗ್ ಕಳೆದ ಎರಡೂವರೆ ತಿಂಗಳಿಂದ ಹಾಸಿಗೆ ಹಿಡಿದಿದ್ದರು. ಅ. 1ರಂದು ನಡೆದ ಘಟನೆ ರಿಷಿಕಾ ಬದುಕನ್ನು ಕತ್ತಲೆಗೆ ನೂಕಿತ್ತು. ಸದ್ಯ ಎರಡೂವರೆ ತಿಂಗಳ ವೈದ್ಯಕೀಯ ಚಿಕಿತ್ಸೆಯಿಂದ ಅವರು ಚೇತರಿಕೆ ಕಂಡಿದ್ದಾರೆ.

actor rishika singh
ನಟಿ ರಿಷಿಕಾ ಸಿಂಗ್ ಚೇತರಿಕೆ ...

By

Published : Oct 20, 2020, 9:26 AM IST

ಸ್ಯಾಂಡಲ್​​ವುಡ್​​ನ ಹೆಸರಾಂತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪುತ್ರಿ ಹಾಗೂ ಜನಪ್ರಿಯ ನಟ ಆದಿತ್ಯ ಅವರ ಸಹೋದರಿ ರಿಷಿಕಾ ಸಿಂಗ್ ಎರಡೂವರೆ ತಿಂಗಳ ವೈದ್ಯಕೀಯ ಚಿಕಿತ್ಸೆಯಿಂದ ಚೇತರಿಕೆ ಕಂಡಿದ್ದಾರೆ.

ನಟಿ ರಿಷಿಕಾ ಸಿಂಗ್ ಚೇತರಿಕೆ: ಸಾಮಾಜಿಕ ಜಾಲಾತಾಣದಲ್ಲಿ ಫೋಟೋ ಹಂಚಿಕೊಂಡ ಸಹೋದರ

ರಿಷಿಕಾ ಸಿಂಗ್ ಸಹ ಕನ್ನಡದ ಸಿನಿಮಾ ನಟಿ. ಸಹೋದರಿಯ ಆರೋಗ್ಯ ಸ್ಥಿತಿ ಸುಧಾರಿಸಿರುವುದಕ್ಕೆ ನಟ ಆದಿತ್ಯ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಅ. 1ರಂದು ರಿಷಿಕಾ ಸಿಂಗ್ ಹಾಗೂ ಅರ್ಪಿತಾ (ನಟ ಜೈ ಜಗದೀಶ್ ಮೊದಲನೇ ಹೆಂಡತಿ ಪುತ್ರಿ) ಬೆಂಗಳೂರಿನ ಹೊರವಲಯದಲ್ಲಿರುವ ಮಾವಳ್ಳಿಪುರಂನಲ್ಲಿ ಕಾರಿನಲ್ಲಿ ಚಲಿಸುತ್ತಿರುವಾಗ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ರಿಷಿಕಾ ಸಿಂಗ್​ ಅವರ ಬೆನ್ನು ಮೂಳೆಗೆ ತೀವ್ರ ಪೆಟ್ಟಾಗಿತ್ತು. ರಿಷಿಕಾ ಮತ್ತು ಅರ್ಪಿತಾ ಬರ್ತ್ ಡೇ ಪಾರ್ಟಿಯೊಂದರಲ್ಲಿ ಮಧ್ಯರಾತ್ರಿ ಮನೆಗೆ ಧಾವಿಸುತ್ತಿರುವಾಗ ಅಪಘಾತ ನಡೆದಿತ್ತು.

ಮಗಳ ಪರಿಸ್ಥಿತಿಯನ್ನು ಕಂಡು ಮರುಗಿದ ಅಪ್ಪ ರಾಜೇಂದ್ರ ಸಿಂಗ್ ಬಾಬು, ರಕ್ಷಣೆಗೆ ದೇವರ ಮೊರೆ ಹೋದರು. ಮಂತ್ರಾಲಯದಿಂದ ಮೃತ್ತಿಕೆ ತರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಯಿಂದ ಮಗಳು ಚೇತರಿಸಿಕೊಳ್ಳಲಿ ಎಂದು ಚಡಪಡಿಸಿದರು. ಈ ಸಮಯದಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ಸಾಲ ಕೂಡ ಮಾಡಬೇಕಾದ ಪರಿಸ್ಥಿತಿ ಬಂತು. ಮೊದಲೇ ಸಂಕಷ್ಟದಲ್ಲಿ ಇದ್ದ ರಾಜೇಂದ್ರ ಸಿಂಗ್ ಬಾಬು ಅವರಿಗೆ ಲಕ್ಷಾಂತರ ಹಣವನ್ನು ಕೊರೊನಾ ಸಂಕಷ್ಟದಲ್ಲಿ (ದರ್ಶನ್ ಅಭಿನಯದ ರಾಕ್​​ಲೈನ್ ವೆಂಕಟೇಶ್ ನಿರ್ಮಾಣದ ರಾಜ ವೀರ ಮದಕರಿ ಸಿನಿಮಾ ಚಿತ್ರೀಕರಣ ಸಹ ಸ್ಥಗಿತವಾಗಿದೆ) ಹೊಂದಿಸುವುದು ಕಷ್ಟವೇ ಆಯಿತು.

ನಟಿ ರಿಷಿಕಾ ಸಿಂಗ್ 2011ರಲ್ಲಿ ದುನಿಯಾ ವಿಜಯ್ ನಟನೆಯ ‘ಕಂಠೀರವ’ ಸಿನಿಮಾದಲ್ಲಿ ಮೊದಲು ನಾಯಕಿಯಾಗಿ ನಟಿಸಿದ್ದರು. ನಂತರ ಕಳ್ಳ ಮಳ್ಳ ಸುಳ್ಳ, ಕಠಾರಿ ವೀರ ಸುರ ಸುಂದರಾಂಗಿ, ಬೆಂಕಿ ಬಿರುಗಾಳಿ, ಮಾಣಿಕ್ಯ, ಕಿರೀಟ, ತುಂತುರು, ದೇವಯಾನಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅಲ್ಲದೆ ಎಫ್​​ಎಂ ಎಂಬ ಸಿನಿಮಾಕ್ಕೆ ಸಹಿ ಸಹ ಮಾಡಿದ್ದರು.

ABOUT THE AUTHOR

...view details