ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕಿ ಪುಟ್ಟ ಗೌರಿಯಾಗಿ ವೀಕ್ಷಕರ ಮನ ಸೆಳೆದಿರುವ ರಂಜಿನಿ ರಾಘವನ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ತಯಾರಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಕನ್ನಡತಿ'ಯಲ್ಲಿ ಭುವನೇಶ್ವರಿ ಪಾತ್ರಧಾರಿಯಾಗಿ ರಂಜಿನಿ ಕಾಣಿಸುತ್ತಿದ್ದಾರೆ.
'ಪುಟ್ಟಗೌರಿಯಾಗಿದ್ದ' ನಟಿ ಇದೀಗ ವ್ಯಾಕರಣ ಕಲಿಸುವ 'ಕನ್ನಡತಿ'! - ರಂಜಿನಿ ರಾಘವನ್
ನಟಿ ರಂಜಿನಿ ರಾಘವನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಕನ್ನಡತಿ'ಯಲ್ಲಿ ಭುವನೇಶ್ವರಿ ಪಾತ್ರಧಾರಿಯಾಗಿ ಕಾಣಿಸುತ್ತಿದ್ದಾರೆ.
ಅಂದ ಹಾಗೇ ಕನ್ನಡತಿ ಧಾರಾವಾಹಿಯಲ್ಲಿ ರಂಜಿನಿ ಅವರು ಕನ್ನಡ ಟೀಚರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಜನರ ವ್ಯಾಕರಣ ಮತ್ತು ಉಚ್ಛಾರಣೆಯನ್ನು ಸರಿಪಡಿಸುವ ಜವಾಬ್ದಾರಿ ಇವರದಂತೆ. ಇದನ್ನು ನಾನು ಕೇವಲ ಧಾರಾವಾಹಿಯಲ್ಲಿ ಮಾತ್ರ ಮಾಡುತ್ತಿಲ್ಲ, ಬದಲಿಗೆ ನಿಜ ಜೀವನದಲ್ಲೂ ಕೂಡಾ ಹೀಗೆ ಮಾಡುತ್ತೇನೆ ಎಂದು ರಂಜಿನಿ ಹೇಳಿದ್ದಾರೆ.
ಎಲ್ಲದಕ್ಕಿಂತಲೂ ಮುಖ್ಯವಾದ ಸಂಗತಿ ಎಂದರೆ ರಂಜಿನಿ ರಾಘವನ್ ಅವರು ಎರಡನೇ ಇನ್ನಿಂಗ್ಸ್ ಆರಂಭಿಸಿರುವುದು ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ. 'ಪುಟ್ಟ ಗೌರಿ ಮದುವೆ' ಧಾರಾವಾಹಿಯಿಂದ ಹೊರಬಂದ ನಂತರ ನನಗೆ ಧಾರಾವಾಹಿಯಲ್ಲಿ ನಟಿಸುವ ಇರಾದೆ ಇರಲಿಲ್ಲ. ಆದರೆ ಕಲರ್ಸ್ ಕನ್ನಡ ವಾಹಿನಿಯಂದ ಧಾರಾವಾಹಿಯಲ್ಲಿ ನಟಿಸುವ ಆಫರ್ ಬಂದಾಗ ನಿಜಕ್ಕೂ ಆಶ್ಚರ್ಯವಾಯಿತು ಎನ್ನುತ್ತಾರೆ ನಟಿ ರಂಜಿನಿ.