ಕರ್ನಾಟಕ

karnataka

ETV Bharat / sitara

ಶಾರುಖ್ ಖಾನ್ ಮಗನ ಬಂಧನದ ಬಗ್ಗೆ ನಟಿ ರಮ್ಯಾ ಹೀಗೆ ಅಂದಿದ್ದು ಯಾಕೆ? - Actress ramya

ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಅವರನ್ನು ಎನ್​ಸಿಬಿ ಬಂಧಿಸಿದೆ. ಈ ವಿಚಾರದ ಬಗ್ಗೆ ರಮ್ಯಾ ತಮ್ಮ ಹಲವು ಪ್ರಶ್ನೆಗಳನ್ನ ಕೇಳಿದ್ದಾರೆ. ಆರ್ಯನ್ ಖಾನ್ ಬಳಿ ಡ್ರಗ್​ ಇರಲಿಲ್ಲ ಮತ್ತು ಅವರು ಡ್ರಗ್ಸ್​​ ಸೇವಿಸಿದ ಬಗ್ಗೆ ದಾಖಲೆ ಇಲ್ಲ. ಆದರೂ ಆರ್ಯನ್ ಖಾನ್ ಬಂಧನ ನಡೆದಿದೆ. ಹೇಗೆ ಇದೆಲ್ಲಾ ಎಂದು ಪ್ರಶ್ನಿಸಿದ್ದಾರೆ.

Actress ramya spark against Central govt Over arrest of shahrukh khan son
ಶಾರುಖ್ ಖಾನ್ ಮಗನ ಬಂಧನದ ಬಗ್ಗೆ ನಟಿ ರಮ್ಯಾ ಯಾಕಿಂಗದ್ರು?

By

Published : Oct 6, 2021, 8:41 PM IST

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​ನ್ನು ಹೆಚ್ಚಿನ ವಿವಾರಣೆಗಾಗಿ ಅಕ್ಟೋಬರ್ 7ರ ವರೆಗೆ ಎನ್‌ಸಿಬಿ ವಶಕ್ಕೆ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಇನ್ನು ಆರ್ಯನ್ ಖಾನ್ ಬಂಧನದ ಬಗ್ಗೆ ಬಾಲಿವುಡ್​ನಲ್ಲಿ ಸಾಕಷ್ಟು ತಾರೆಯರು, ಶಾರುಖ್ ಮಗನ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇದೀಗ ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆಯಾಗಿ ಮಿಂಚಿದ ರಮ್ಯಾ, ಶಾರುಖ್ ಖಾನ್ ಪುತ್ರನ ಬಗ್ಗೆ ಹಲವು ಪ್ರಶ್ನೆಗಳನ್ನ ಕೇಳಿದ್ದಾರೆ. ಸದ್ಯ ಚಿತ್ರರಂಗದಿಂದ ಹಾಗೂ ರಾಜಕೀಯದಿಂದ ದೂರ ಉಳಿದಿರುವ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಮಾಜದಲ್ಲಿ ಆಗಾದ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಬಿಜೆಪಿ ಸರ್ಕಾರ ತೆಗೆದುಕೊಳ್ಳುವ ಸಾಕಷ್ಟು ನಿರ್ಧಾರಗಳನ್ನು ರಮ್ಯಾ ಟೀಕಿಸುವ ಮೂಲಕ ಹೆಚ್ಚು ಮುನ್ನೆಲೆಗೆ ಬರುತ್ತಿದ್ದಾರೆ.

ಶಾರುಖ್ ಖಾನ್ ಮಗನ ಬಂಧನದ ಬಗ್ಗೆ ರಮ್ಯ ಪ್ರಶ್ನೆ

ಇದೀಗ ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಅವರನ್ನು ಎನ್​ಸಿಬಿ ಬಂಧಿಸಿದೆ. ಈ ವಿಚಾರದ ಬಗ್ಗೆ ರಮ್ಯಾ ತಮ್ಮ ಹಲವು ಪ್ರಶ್ನೆಗಳನ್ನ ಕೇಳಿದ್ದಾರೆ. ಆರ್ಯನ್ ಖಾನ್ ಬಳಿ ಡ್ರಗ್​ ಇರಲಿಲ್ಲ ಮತ್ತು ಅವರು ಡ್ರಗ್ಸ್​​ ಸೇವಿಸಿದ ಬಗ್ಗೆ ದಾಖಲೆ ಇಲ್ಲ. ಆದರೂ ಆರ್ಯನ್ ಖಾನ್ ಬಂಧನ ನಡೆದಿದೆ. ಮತ್ತೊಂದು ಕಡೆ ಬಿಜೆಪಿ ಸಚಿವರ ಮಗ 4 ಜನ ರೈತರನ್ನು ಕೊಂದಿದ್ದಾರೆ.

ಆದರೆ, ಬಿಜೆಪಿ ಮಗನ ಬಂಧನ ಮಾತ್ರ ಆಗಿಲ್ಲ. ಮೃತರ ಕುಟುಂಬವನ್ನು ಪ್ರಿಯಾಂಕಾ ಗಾಂಧಿ ಭೇಟಿ ಮಾಡಲು ಹೊರಟಾಗ ನೀವು ಅವರನ್ನು ಬಂಧಿಸಿದ್ದೀರಿ. ಇದಾ ನವ ಭಾರತ ಎಂದು ಪ್ರಶ್ನಿಸಿದ್ದಾರೆ.

ಆರ್ಯನ್ ಖಾನ್ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಆದರೂ ಆರ್ಯನ್ ಖಾನ್ ಎನ್‌ಸಿ ಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ವಿಚಾರಣೆ ವೇಳೆ ಆರ್ಯನ್​ ಅವರು ಹೇಳಿದ್ದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಎನ್​ಸಿಬಿ ಹೇಳುತ್ತಿದೆ. ಆದರೆ, ಹೊರಗಡೆ, ವಿಚಾರಣೆ ವೇಳೆ ದೀಪಿಕಾ ಪಡುಕೋಣೆ ಸಾಕಷ್ಟು ಬಾರಿ ಅತ್ತರು, ಆರ್ಯನ್​ ಖಾನ್​ ಅತ್ತಿದ್ದಾರೆ, ಅಂತಾ ಗಾಸಿಪ್​ಗಳು ಹರಿದಾಡುತ್ತಿದೆ.

ಎನ್ ಸಿ ಬಿ ವಿಚಾರಣೆ ವೇಳೆ ಅಲ್ಲಿ ಯಾರೂ ಇರುವುದಿಲ್ಲ. ಆದರೆ, ಈ ಎಲ್ಲಾ ಮಾಹಿತಿಗಳು ಮಾಧ್ಯಮಗಳಿಗೆ ಹೇಗೆ ಸಿಕ್ಕಿತು? ಅಂತಾ ರಮ್ಯಾ ಪ್ರಶ್ನಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ABOUT THE AUTHOR

...view details