ಕರ್ನಾಟಕ

karnataka

ETV Bharat / sitara

ಜಾಮೀನು ಕೋರಿ ಸುಪ್ರೀಂ ಕೊರ್ಟ್​​ ಮೊರೆ ಹೋದ ನಟಿ ರಾಗಿಣಿ - Ragini News

ನಟಿ ರಾಗಿಣಿ ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

Actress Ragini has filed a petition in the Supreme Court seeking bail
ಜಾಮೀನು ಕೋರಿ ಸುಪ್ರೀಂಕೊರ್ಟ್​​ ಮೊರೆ ಹೋದ ನಟಿ ರಾಗಿಣಿ

By

Published : Nov 28, 2020, 6:26 PM IST

ಸ್ಯಾಂಡಲ್​​ವುಡ್​ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಬಂಧನವಾಗಿ ಜೈಲಿನಲ್ಲಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ತಮ್ಮ ಜಾಮೀನಿಗಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದರೂ ಫಲಿಸುತ್ತಿಲ್ಲ. ಇದುವರೆಗೆ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ನಟಿ ರಾಗಿಣಿ ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಮತ್ತೆ ಹೈಕೋರ್ಟ್​​​ ಮೊರೆ ಹೋದ ಸಂಜನಾ

ಆದರೆ ಸಂಜನಾ ಮಾತ್ರ ಸುಪ್ರೀಂ ಕೋರ್ಟ್​ಗೆ ಹೋಗುವ ಬದಲು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ ನ. 3ರಂದು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದರೂ ಇದೀಗ ಮತ್ತೆ ಜಾಮೀನಿಗೆ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್​ನಲ್ಲಿ ಸಂಜನಾ ಮತ್ತು ರಾಗಿಣಿ ಇಬ್ಬರೂ ಪರಪ್ಪನ ಅಗ್ರಹಾರ ಸೇರಿದ್ದು, ಇದೇ ತಿಂಗಳ​ 3ರಂದು ಇವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿತ್ತು.

ಸದ್ಯ ನಟಿ ರಾಗಿಣಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದು, ಡಿ. 4ರಂದು ಇವರ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ABOUT THE AUTHOR

...view details