ಕೊರೊನಾ ಎರಡನೇ ಅಲೆಯಿಂದ ಇಡೀ ರಾಜ್ಯ ಕಂಗೆಟ್ಟಿದೆ.
ಇಂತಹ ಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ, ನಟಿ ರಾಗಿಣಿ ದ್ವಿವೇದಿ, ಊಟ ಹಾಗೂ ಆಹಾರದ ಕಿಟ್ಗಳನ್ನ ಕೊಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.
ಕೊರೊನಾ ಎರಡನೇ ಅಲೆಯಿಂದ ಇಡೀ ರಾಜ್ಯ ಕಂಗೆಟ್ಟಿದೆ.
ಇಂತಹ ಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ, ನಟಿ ರಾಗಿಣಿ ದ್ವಿವೇದಿ, ಊಟ ಹಾಗೂ ಆಹಾರದ ಕಿಟ್ಗಳನ್ನ ಕೊಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.
ಬರೀ ಇಷ್ಟಕ್ಕೆ ಅವರು ಸುಮ್ಮನಾಗಿಲ್ಲ. ಇದೀಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ರಕ್ತದಾನ ಮಾಡುವ ಮೂಲಕ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಸದ್ಯ ಎಲ್ಲೆಡೆ ಕೊರೋನಾ ಭೀತಿಯಿಂದಾಗಿ ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಯಾವುದೇ ಲಸಿಕೆ ಹಾಕಿಸಿಕೊಂಡರೆ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಹೀಗಾಗಿ, ಸ್ವ-ಇಚ್ಛೆಯಿಂದ ರಾಗಿಣಿ ರಕ್ತದಾನ ಮಾಡಿದ್ದು, ಅಭಿಮಾನಿಗಳಿಗೂ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ.
ಲಯನ್ಸ್ ಬ್ಲಡ್ ಬ್ಯಾಂಕ್ನಲ್ಲಿ ರಾಗಿಣಿ ದ್ವಿವೇದಿ, ರಕ್ತದಾನ ಮಾಡಿ, ನಂತರ ಲಯನ್ಸ್ ಬ್ಲಡ್ನ ಸರ್ಟಿಫಿಕೇಟ್ ಪಡೆದುಕೊಂಡಿಕೊಂಡಿದ್ದಾರೆ.