ಕರ್ನಾಟಕ

karnataka

By

Published : Mar 6, 2019, 6:36 PM IST

ETV Bharat / sitara

ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ರಾಧಿಕಾ ಪಂಡಿತ್​... ಕಾರಣ?

ರೆಬಲ್​ ಸ್ಟಾರ್​ ಅಂಬರೀಶ್ ನಿಧನದ ಹಿನ್ನೆಲೆ ರಾಕಿಂಗ್ ಸ್ಟಾರ್​ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿರಿರಲಿಲ್ಲ. ಈಗ ರಾಧಿಕಾ ಪಂಡಿತ ಕೂಡ ಪತಿಯನ್ನೇ ಅನುಸರಿಸಿದ್ದಾರೆ.

ನಾಳೆ ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ

ನಾಳೆ ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ. ಆದ್ರೆ, ಈ ಬಾರಿ ಕೆಲವು ಕಾರಣಗಳಿಂದ ಅವರು ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ.

ನಾಳೆ ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ

ಕಾರ್ಯ ನಿಮಿತ್ತ ರಾಧಿಕಾ ಪಂಡಿತ್ ಬೇರೆ ಊರಿನಲ್ಲಿರುವ ಕಾರಣ ಬರ್ತ್ ಡೇ ಆಚರಿಕೊಳ್ಳುತ್ತಿಲ್ಲ. ಈ ವಿಚಾರವನ್ನು ಸೆಲ್ಫಿ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ‌ಪ್ರತಿ ವರ್ಷ ಅವರು ನೂರಾರು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಳ್ಳುತ್ತಿದ್ರು. ಆದರೆ, ಈ ಬಾರಿ ಅಂಬರೀಶ್​ ನಿಧನರಾಗಿದ್ದರಿಂದ ಯಶ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಹೀಗಾಗಿ ರಾಧಿಕಾ ಸಹ ಈ ವರ್ಷ ಬರ್ತಡೇ ಆಚರಣೆಯಿಂದ ದೂರ ಉಳಿದಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಕೊಂಚ ಬೇಸರ ಮೂಡಿಸಿದೆ.

ABOUT THE AUTHOR

...view details