ಕರ್ನಾಟಕ

karnataka

ETV Bharat / sitara

ಮಿಸಸ್ ರಾಮಾಚಾರಿಗೆ ಅದ್ದೂರಿ ಸೀಮಂತ, ಮಿಂಚಿದ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ - Sandalwood Suddi

ನಟಿ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮೊಗ್ಗಿನ ಮನಸ್ಸಿನ ಹುಡುಗಿಯ ಸೀಮಂತ ಕಾರ್ಯ ಅದ್ಧೂರಿಯಾಗಿ ನಡೆಯಿತು.

ರಾಧಿಕಾ ಪಂಡಿತ್

By

Published : Oct 15, 2019, 4:12 PM IST

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮೊಗ್ಗಿನ ಮನಸ್ಸಿನ ನಟಿಯ ಸೀಮಂತ ಕಾರ್ಯ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಹಳದಿ ಬಣ್ಣದ ಗೌನ್ ಧರಿಸಿ ರಾಧಿಕಾ ಪಂಡಿತ್ ಸಿಂಡ್ರೆಲ್ಲಾರಂತೆ ಮಿಂಚಿದ್ದಾರೆ. ಈ ಫೋಟೋವನ್ನು ರಾಧಿಕಾ ತಮ್ಮ ಇನ್‍ಸ್ಟಾಗ್ರಾಂ ಹಾಗೂ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಲ್ಲದೆ ‘ನನ್ನ ಆತ್ಮೀಯ ಸ್ನೇಹಿತರು ನನಗೆ ನೀಡಿದ ಅದ್ಭುತ ಸೀಮಂತ ಕಾರ್ಯಕ್ರಮದ ಒಂದು ಇಣುಕು ನೋಟ. ಹೆಚ್ಚಿನ ಫೋಟೋಗಳು ಹಾಗೂ ವಿವರಗಳು ಶೀಘ್ರದಲ್ಲೇ ಬರಲಿದೆ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಮಿಸಸ್ ರಾಮಾಚಾರಿ ಫೋಟೋ ನೋಡಿ ಅಭಿಮಾನಿಗಳು ಬ್ಯೂಟಿಫುಲ್, ಸೂಪರ್ ಮಮ್ಮಿ ಎಂದೆಲ್ಲಾ ಕಮೆಂಟ್ ಮಳೆಗರೆಯುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details