ಕರ್ನಾಟಕ

karnataka

ETV Bharat / sitara

'ಲವ್‌ ಯೂ ರಚ್ಚು' ಚಿತ್ರದಲ್ಲಿ ಪಾತ್ರಕ್ಕನುಗುಣವಾಗಿ ನಟಿಸಿದ್ದೇನೆ: ರಚಿತಾ ರಾಮ್ - ನಟಿ ರಚಿತಾ ರಾಮ್

ನೀವು ಹಾಟ್ ಸೀನ್​​ಗಳಲ್ಲಿ ನಟಿಸಲ್ಲ ಎಂದವರು, ಇದೀಗ ಈ ಸಿನಿಮಾದಲ್ಲಿ ಅಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲು ಕಾರಣವೇನು? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ರಚಿತಾ, ನೀವು ಚಿತ್ರ ನೋಡಿದಾಗ ನಾನು ಹಾಟ್ ಆಗಿ ನಟಿಸಲು ಕಾರಣ ಏನೆಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

Actress Rachita Ram
ನಟಿ ರಚಿತಾ ರಾಮ್

By

Published : Nov 10, 2021, 2:48 PM IST

Updated : Nov 11, 2021, 7:27 PM IST

ಸ್ಯಾಂಡಲ್​​​ವುಡ್‌ನಲ್ಲಿ ಫೋಟೋ ಶೂಟ್​​​ನಿಂದಲೇ ಜೋರಾಗಿ ಸದ್ದು ಮಾಡುತ್ತಿರುವ ಸಿನಿಮಾ 'ಲವ್ ಯು ರಚ್ಚು'. ಅಜಯ್ ರಾವ್ ಹಾಗು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ ಗಾಂಧಿನಗರದಲ್ಲಿ ಹಾಟ್ ಟಾಪಿಕ್ ಆಗಿದೆ. ಅದಕ್ಕೆ ಕಾರಣ ಈ ಚಿತ್ರದ ಒಂದು ರೊಮ್ಯಾಂಟಿಕ್ ಹಾಡು.

ಹೌದು, ಈ ಹಾಡಿನಲ್ಲಿ ಡಿಂಪಲ್ ಕ್ವೀನ್ ರಚ್ಚು ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಪಡ್ಡೆಹುಡುಗರ ನಿದ್ದೆಗೆಡಿಸಿದೆ‌‌. ಇತ್ತೀಚೆಗಷ್ಟೇ ಈ ಚಿತ್ರದ 'ಮುದ್ದು ನೀನು' ಎಂಬ ಹಾಡು ರಿಲೀಸ್ ಆಗಿದ್ದು ಸಾಕಷ್ಟು ಸೌಂಡ್ ಮಾಡುತ್ತಿದೆ.

ಲವ್ ಯು ರಚ್ಚು ಸಿನಿಮಾ ತಂಡ

ಲವ್ ಯು ರಚ್ಚು ಸಿನಿಮಾ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಚಿತಾ, ಫಸ್ಟ್ ನೈಟ್​​ನಲ್ಲಿ ಏನ್ ಮಾಡ್ತೀರಾ? ಎಂದು ಕೇಳುವ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದಾರೆ. ಈ ಹಿಂದೆ ಉಪೇಂದ್ರ ಜತೆ 'ಐ ಲವ್ ಯೂ' ಚಿತ್ರದಲ್ಲಿ ಸಿಕ್ಕಾಪಟ್ಟೇ ಹಾಟ್ ಆಗಿ ಕಾಣಿಸಿಕೊಂಡಿದ್ದ, ಡಿಂಪಲ್ ಕ್ವೀನ್ ಈಗ ಲವ್ ಯು ರಚ್ಚು ಚಿತ್ರದಲ್ಲಿ ಮತ್ತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ನೀವು ಹಾಟ್ ಸೀನ್​​ಗಳಲ್ಲಿ ನಟಿಸಲ್ಲ ಎಂದವರು, ಇದೀಗ ಈ ಸಿನಿಮಾದಲ್ಲಿ ಅಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲು ಕಾರಣವೇನು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ರಚಿತಾ, ನಾನು ಹೇಳಿದ್ದೆ. ಆದರೆ, ಮತ್ತೆ ನಟಿಸಿದ್ದೇನೆ ಅಂದರೆ ಅದರಲ್ಲಿ ಏನೋ ಒಂದು ವಿಶೇಷತೆ ಇದೆ ಅಂತ ಅರ್ಥ.

ಈ ಚಿತ್ರದಲ್ಲಿ ನಾನು ಯಾಕೆ ಅಷ್ಟು ಹಾಟ್‌ ಆಗಿದ್ದೇನೆ ಗೊತ್ತಾ?. ಫಸ್ಟ್‌ನೈಟ್‌ನಲ್ಲಿ ಏನ್ ಮಾಡ್ತಾರೆ ಅದೇ ರೊಮ್ಯಾನ್ಸ್ ಅಲ್ವಾ. ನಾವು ಮಾಡಿದ್ದು ಅದನ್ನೇ. ಈ ಚಿತ್ರದಲ್ಲಿ ಪಾತ್ರದ ಸಂದರ್ಭಕ್ಕನುಗುಣವಾಗಿ ನಾನು ಅಭಿನಯಿಸಿದ್ದೇನೆ ಎಂದು ರಚಿತಾ ರಾಮ್ ಹೇಳಿದ್ದಾರೆ.

ಲವ್ ಯು ರಚ್ಚು ಸಿನಿಮಾ ತಂಡ

ನಿರ್ದೇಶಕ ಕಮ್ ನಿರ್ಮಾಪಕ ಗುರುದೇಶ್ ಪಾಂಡೆ ಲವ್ ಯು ರಚ್ಚು ಸಿನಿಮಾವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಯುವ ನಿರ್ದೇಶಕ ಶಂಕರ್ ರಾಜ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಈ ಚಿತ್ರದ ಹಾಡು ಪಡ್ಡೆ ಹುಡಗರ ನಿದ್ದೆಗೆಡಿಸುವಂತೆ ಮೂಡಿ ಬಂದಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಲವ್ ಯು ರಚ್ಚು ಸಿನಿಮಾವನ್ನು ಸದ್ಯದಲ್ಲೇ ತೆರೆಗೆ ತರಲು ನಿರ್ಮಾಪಕ ಗುರುದೇಶ್ ಪಾಂಡೆ ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ:'ಲವ್ ಯು ರಚ್ಚು' ಸಿನಿಮಾದಲ್ಲಿ ಬ್ಯಾಕ್‌ಲೆಸ್ ಆದ ಡಿಂಪಲ್‌ ಕ್ವೀನ್

Last Updated : Nov 11, 2021, 7:27 PM IST

ABOUT THE AUTHOR

...view details