ಕರ್ನಾಟಕ

karnataka

ETV Bharat / sitara

ಎರಡನೇ ಮದುವೆ ಸುದ್ದಿ ಸುಳ್ಳು ಎಂದ ನಮ್ಮೂರ ಮಂದಾರ ಹೂವೆ ಪ್ರೇಮಾ! - actress prema second marriage

ಪ್ರೇಮಾ 44ನೇ ವಯಸ್ಸಿನಲ್ಲಿ ಎರಡನೇ‌‌ ಮದುವೆ ಆಗಲಿದ್ದಾರೆ ಎಂಬ ಸುದ್ದಿ, ಪ್ರೇಮಾ ನೆಮ್ಮದಿಯನ್ನ ಕೆಡಿಸಿದ್ದು, ಇದೆಲ್ಲಾ ಸುಳ್ಳು ಸುದ್ದಿ ಅಂತಾ ಸ್ವತಃ ಅವರೇ ಹೇಳಿದ್ದಾರೆ.

prema
prema

By

Published : Jun 2, 2021, 10:05 PM IST

ಓಂ, ಕನಸುಗಾರ, ಯಜಮಾನ, ನಮ್ಮೂರ ಮಂದಾರ ಹೂವೇ, ಉಪೇಂದ್ರ ಹೀಗೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ, ನಟಿಸಿ ಸೈ ಎನ್ನಿಸಿಕೊಂಡ ಕೊಡಗಿನ ನಟಿ ಪ್ರೇಮ, ಮದುವೆ ಬಳಿಕ ತಮ್ಮ ನಿಜ ಜೀವನದಲ್ಲಿ ಸಾಕಷ್ಟು, ಸವಾಲುಗಳನ್ನ ಎದುರಿಸುತ್ತಿದ್ದಾರೆ. ಅವರ ಬಗೆಗಿನ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರ ನಿದ್ದೆಗೆಡಿಸಿದೆ.

ನಟಿ ಪ್ರೇಮ ಸದ್ಯಕ್ಕೆ ಯಾವುದೇ ಸಿನಿಮಾಗಳನ್ನ‌‌ ಮಾಡುತ್ತಿಲ್ಲ. ಆದರೆ, ಕಳೆದ ವರ್ಷ ಗ್ಲ್ಯಾಮರ್ಸ್ ಫೋಟೋ ಶೂಟ್ ಮಾಡಿಸಿದ್ರು. 2017ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಉಪೇಂದ್ರ ಮತ್ತೆ ಬಾ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ನಂತರ ಪ್ರೇಮ ಯಾವುದೇ ಸಿನಿಮಾ‌ ಮಾಡಿರಲಿಲ್ಲ.

ಇನ್ನು ಈ‌ ಸಿನಿಮಾಗೂ ಮುಂಚೆಯೇ ನಟಿ ಪ್ರೇಮ ಮೊದಲ ಮದುವೆ ಮುರಿದು ಬಿದ್ದಿತ್ತು. ಆ ಸಮಯದಲ್ಲಿ ಪ್ರೇಮ ಅವರ ತಂದೆ ನಿಧನರಾದರು. ಈಗ ಪ್ರೇಮ ಅವರಿಗೆ ಎರಡನೇ ಮದುವೆ ಮಾಡಿಕೊಳ್ಳಲು ಮನೆಯಲ್ಲಿ ತುಂಬ ಒತ್ತಾಯ ಮಾಡಲಾಗುತ್ತಿದೆ, ಈಗ ಅವರು ಮದುವೆಯಾಗಲಿದ್ದಾರೆ. ಅಷ್ಟೇ ಅಲ್ಲ ಪ್ರೇಮ ಮಾನಸಿಕವಾಗಿ ಬಳಲುತ್ತಿದ್ದಾರೆ ಅಂತಾ, ಸೋಷಿಯಲ್ ಮೀಡಿಯಾದಲ್ಲಿ ಪ್ರೇಮಾ ಅವರ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ‌. ಈ ಬಗ್ಗೆ ಬೇಸರಗೊಂಡಿರುವ ಕ್ಷಣ ಕ್ಷಣದ ಚೆಲುವೆ ಪ್ರೇಮಾ, ಈ ವಿಚಾರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಇವೆಲ್ಲವೂ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ಕೂಡ ಅವರ ವೈಯಕ್ತಿಕ ವಿಚಾರದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದಾಗ ಪ್ರೇಮ, ತುಂಬಾನೇ ನೊಂದು ಹೋಗಿದ್ದರು. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರೇಮ ಅಷ್ಟಾಗಿ ಸಕ್ರಿಯವಾಗಿಲ್ಲ. ಆದರೆ, ಈಗ ಪ್ರೇಮ 44ನೇ ವಯಸ್ಸಿನಲ್ಲಿ ಎರಡನೇ‌‌ ಮದುವೆ ಆಗಲಿದ್ದಾರೆ ಎಂಬ ಸುದ್ದಿ, ಪ್ರೇಮ ನೆಮ್ಮದಿಯನ್ನ ಕೆಡಿಸಿದ್ದು, ಇದೆಲ್ಲಾ ಸುಳ್ಳು ಸುದ್ದಿ ಅಂತಾ ಸ್ವತಃ ಪ್ರೇಮಾ ಅವರೇ ಹೇಳಿದ್ದಾರೆ.

ABOUT THE AUTHOR

...view details