ನಟಿ ಪಾರುಲ್ ಯಾದವ್ ದುಃಖ ತಡೆಯಲಾರದೇ ಗಳಗಳನೇ ಅತ್ತಿದ್ದಾರೆ. ಅವರ ಕಣ್ಣೀರಿನ ಕೋಡಿಗೆ ಕಾರಣ ವಿಶ್ವಕಪ್ ಸೆಮಿಫೈನಲ್ಲ್ಲಿ ಭಾರತ ತಂಡಕ್ಕೆ ಎದುರಾದ ಸೋಲು.
ದುಃಖ ತಡೆಯಲಾರದೆ ಗಳಗಳನೇ ಅತ್ತ ನಟಿ ಪಾರುಲ್ ಯಾದವ್ - ನ್ಯೂಜಿಲ್ಯಾಂಡ್
ವಿಶ್ವಕಪ್ ಸೆಮಿಫೈನಲ್ನ ನಿರ್ಣಾಯಕ ಪಂದ್ಯದಲ್ಲಿ ಭಾರತದ ಸೋಲು ನಟಿ ಪಾರುಲ್ಗೆ ತಡೆಯಲಾರದಷ್ಟು ನೋವುಂಟು ಮಾಡಿದೆ.
ನಿನ್ನೆ ನಡೆದ ರೋಚಕ ಹಣಾಹಣೆಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ ಹಿನ್ನೆಡೆ ಅನುಭವಿಸಿತು. ಈ ಸೋಲು ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳಿಗೆ ಅಪಾರ ದುಃಖ ತರಿಸಿತು. ಸ್ವತಃ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಸಹ ಭಾವುಕರಾಗಿದ್ದರು. ಬಟರ್ಪ್ಲೈ ಬೆಡಗಿ ಪಾರುಲ್ ಕೂಡ ಭಾರತ ತಂಡದ ಸೋಲಿಗೆ ಭಾವುಕರಾಗಿ,ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ತಮ್ಮ ಟ್ವಿಟರ್ಲ್ಲಿ ಹಂಚಿಕೊಂಡಿರುವ ಅವರು, ಇನ್ಮುಂದೆ ನಾನು ಯಾವತ್ತೂ ಕ್ರಿಕೆಟ್ ನೋಡುವುದಿಲ್ಲ ಎಂದು ತಮ್ಮ ದೃಢ ನಿರ್ಧಾರ ಪ್ರಕಟಿಸಿದ್ದಾರೆ.
ಪಾರುಲ್ ಅವರಂತೆ ಸಾಕಷ್ಟು ಅಭಿಮಾನಿಗಳು ತಮ್ಮ ನೋವು ಹೊರಹಾಕಿದ್ದಾರೆ. ಇನ್ನ ಕೆಲವರು ಭಾರತದ ಸೋಲಿಗೆ ಆಕ್ರೋಶವನ್ನೂ ಹೊರಹಾಕಿದ್ದಾರೆ.