ಸಾಕಷ್ಟು ನಟಿಯರು ಮದುವೆ ಬಳಿಕ ಗಂಡ, ಮಕ್ಕಳು, ಅತ್ತೆ, ಮಾವ ಎನ್ನುತ್ತಲೇ ಬ್ಯುಸಿಯಾಗುತ್ತಾರೆ. ಮತ್ತೆ ಕೆಲವು ನಟಿಯರು ಮಕ್ಕಳಾದ ಮೇಲೆ ದಪ್ಪ ಆಗಿಬಿಡುತ್ತಾರೆ. ಮತ್ತೆ ಸಿನಿಮಾಗಳತ್ತ ಮುಖ ಮಾಡುವುದು ಬಹಳ ವಿರಳ ಎಂತಲೇ ಹೇಳಬಹುದು.
ನೋ ವೇ, ಚಾನ್ಸೇ ಇಲ್ಲ, ಅದನ್ನು ನಾನು ಎಂದಿಗೂ ಬಿಡುವುದಿಲ್ಲ: ನೇಹಾ ಪಾಟೀಲ್ - undefined
ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನೇಹಾ ಪಾಟೀಲ್, ನಾನು ಯಾವುದೇ ಕಾರಣಕ್ಕೂ ನಟಿಸುವುದನ್ನು ಬಿಡುವುದಿಲ್ಲ ಎಂದಿದ್ದಾರೆ. ಪತಿ ಕೂಡಾ ಅವರ ಬೆಂಬಲಕ್ಕೆ ನಿಂತಿರುವುದು ನೇಹಾಗೆ ಖುಷಿ ತಂದಿದೆಯಂತೆ.
ನಟಿ ನೇಹಾ ಪಾಟೀಲ್ ಇದಕ್ಕೆ ವಿರುದ್ಧ. ಅವರ ಜೊತೆ ಬಂದ ಸಾಕಷ್ಟು ಗೆಳತಿಯರು ಮದುವೆಯಾಗುವಾಗ ಸಿನಿರಂಗಕ್ಕೆ ಗುಡ್ ಬೈ ಹೇಳಿದರಂತೆ. ಇವೆಲ್ಲದರ ನಡುವೆ ಸಾಕಷ್ಟು ನಿರ್ಮಾಪಕರು ಮದುವೆಯಾದ ಮೇಲೆ ಅವರು ನಾಯಕಿ ಸ್ಥಾನಕ್ಕೆ ಸೂಕ್ತರಲ್ಲ ಎಂದು ನಿರ್ಧರಿಸಿಬಿಡುತ್ತಾರೆ. ಆದರೆ ಭಾರತೀಯ ಚಿತ್ರರಂಗದಲ್ಲಿ ಮದುವೆ ಆದ ನಾಯಕಿಯರೇ ಹೆಚ್ಚು ಅವಕಾಶ ಗಿಟ್ಟಿಸಿಕೊಂಡ ಉದಾಹರಣೆಗಳಿವೆ. ಇತ್ತೀಚಿಗೆ ಮದುವೆ ಆದ ನೇಹಾ ಪಾಟೀಲ್ ಕೂಡಾ ನೋ ವೇ... ನಾನು ಸಿನಿಮಾ ಬಿಡುವ ಚಾನ್ಸೇ ಇಲ್ಲ ಎನ್ನುತ್ತಿದ್ದಾರೆ. ‘ನ್ಯೂರಾನ್’ ಚಿತ್ರದ ಮೂವರು ನಾಯಕಿಯರಲ್ಲಿ ನೇಹಾ ಪಾಟೀಲ್ ಕೂಡಾ ಒಬ್ಬರು.
ಶಿಲ್ಪಾ ಶೆಟ್ಟಿ ಹಾಗೂ ವೈಷ್ಣವಿ ಚಂದ್ರನ್ ಮೆನನ್ ಜೊತೆಗೆ ನೇಹಾ ಕೂಡಾ ‘ನ್ಯೂರಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಸಮಾಜ ಸೇವಕಿ ಪಾತ್ರದಲ್ಲಿ ನೇಹಾ ಅಭಿನಯಿಸಿದ್ದಾರೆ. ಇದು ಫ್ರೆಂಡ್ಸ್ ಪ್ರೊಡಕ್ಷನ್ ಅಡಿ ತಯಾರಾಗಿರುವ ಚಿತ್ರ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಚಿತ್ರದಲ್ಲೂ ನೇಹಾ ನಟ ಪಂಕಜ್ ಜೋಡಿ ಆಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಅವರ ನಾಲ್ವರು ಸಹೋದರರಲ್ಲಿ ಪಂಕಜ್ ಕೂಡಾ ಒಬ್ಬರು. ಅಂದಹಾಗೆ ನೇಹಾ ಪಾಟಿಲ್ಗೆ ಮದುವೆ ನಂತರ ಧಾರಾವಾಹಿಗಳಲ್ಲಿ ಅಭಿನಯಿಸಲು ಹೆಚ್ಚು ಅವಕಾಶ ಬರುತ್ತಿದೆಯಂತೆ. ಆದರೆ ಚಾಲೆಂಜಿಂಗ್ ಪಾತ್ರಗಳನ್ನು ನಿಭಾಯಿಸಬೇಕು ಎನ್ನುವುದು ನೇಹಾ ಅವರ ಗುರಿ. ಪತಿ ಪ್ರಣವ್ ಕೂಡಾ ನೇಹಾಗೆ ಪ್ರೋತ್ಸಾಹ ನೀಡುತ್ತಿರುವುದು ಅವರ ಉತ್ಸಾಹ ಇಮ್ಮಡಿಯಾಗಲು ಕಾರಣವಾಗಿದೆಯಂತೆ.