ಕರ್ನಾಟಕ

karnataka

ETV Bharat / sitara

ಪತಿಯ 'ಸಿಂಗ' ಮಿಸ್​​​ ಮಾಡಲ್ಲ ಅಂದ್ರು ಮೇಘನಾ ರಾಜ್​​

ಬಹುನಿರೀಕ್ಷಿತ ಸಿಂಗ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ನಟಿಸಿರುವ ಸಿಂಗನ ಗೆಲುವಿಗೆ ಸ್ಯಾಂಡಲ್​​ವುಡ್​​ನ ತಾರೆಯರು ಶುಭ ಕೋರುತ್ತಿದ್ದಾರೆ.

By

Published : Jul 18, 2019, 11:13 PM IST

ಸಿಂಗ

ನಾಳೆ ಬಿಡುಗಡೆಯಾಗುತ್ತಿರುವ ತಮ್ಮ ಪತಿ ಚಿರಂಜೀವಿ ಸರ್ಜಾ ಅಭಿನಯದ 'ಸಿಂಗ' ಸಿನಿಮಾಗೆ ನಟಿ ಮೇಘನಾ ರಾಜ್​ ಶುಭ ಕೋರಿದ್ದಾರೆ. ಇಂದು ಸೆಲ್ಫಿ ವಿಡಿಯೋ ಮೂಲಕ ಚಿತ್ರಕ್ಕೆ ವಿಶ್ ಮಾಡಿರುವ ಅವರು, ಶಾನೆ ಟಾಪ್ ಆಗಿರುವ 'ಸಿಂಗ' ಚಿತ್ರ ಜುಲೈ 19ಕ್ಕೆ ಬಿಡುಗಡೆಯಾಗ್ತಿದೆ. ಈ ಸಿನಿಮಾ ನಂಗೆ ತುಂಬಾ ಸ್ಪೆಷಲ್. ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಕಾಯ್ತಿದ್ದೇನೆ. ನೀವೂ 'ಸಿಂಗ' ಚಿತ್ರ ನೋಡಿ ಹರಸಿ ಎಂದಿದ್ದಾರೆ.

ಸಿಂಗ ಚಿತ್ರಕ್ಕೆ ಮೇಘನಾ, ಸೃಜನ್ ವಿಶ್​

ಇನ್ನು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್​ ಕೂಡ ಗೆಳೆಯನ ಸಿನಿಮಾಗೆ ಶುಭ ಹಾರೈಸಿದ್ದಾರೆ. 'ನನ್ನ ಸ್ನೇಹಿತ ಚಿರು ಅಭಿನಯದ 'ಸಿಂಗ' ಚಿತ್ರ ನಾಳೆ ಬಿಡುಗಡೆಯಾಗ್ತದೆ. ಸಿನಿಮಾ ಉತ್ತಮ‌ ಹಾಡು, ಒಳ್ಳೆ ಕಥೆ ಹೊಂದಿದೆ. ದಯವಿಟ್ಟು ಅಭಿಮಾನಿಗಳು ಈ ಸಿನಿಮಾ ಥಿಯೇಟರ್​​ನಲ್ಲೇ ನೋಡಿ. ಅಲ್ಲದೆ ಪೈರಸಿ ಮಾಡಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಸಿಂಗ ಚಿತ್ರವನ್ನು ವಿಜಯ್ ಕಿರಣ್ ನಿರ್ದೇಶನ ಮಾಡಿದ್ದಾರೆ. ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್​ವುಡ್ ಸುಂದ್ರಿ ಅದಿತಿ ಈ ಚಿತ್ರದಲ್ಲಿ ಚಿರುಗೆ ನಾಯಕಿಯಾಗಿ ನಟಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details