ಎರಡು ವರ್ಷಗಳ ಹಿಂದೆ ಬಿಡುಗಡೆಯಾದ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದಲ್ಲಿ ಜಗ್ಗೇಶ್ಗೆ ನಾಯಕಿಯಾಗಿ ನಟಿಸಿದ್ದ ಮೇಘನಾ ಗಾವಂಕರ್, ಇದೀಗ `ಶುಭಮಂಗಳ' ಎಂಬ ಸಿನಿಮಾ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.
1975ರಲ್ಲಿ ಕನ್ನಡ ಚಿತ್ರರಂಗದಲ್ಲಿ ಕಮಾಲ್ ಮಾಡಿದ್ದ ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನ ಚಿತ್ರ 'ಶುಭಮಂಗಳ' ಪ್ರಣಯರಾಜ ಶ್ರೀನಾಥ್ ಮತ್ತು ಆರತಿ ಕಾಂಬಿನೇಷನ್ನಲ್ಲಿ ಹಿಟ್ ಆಗಿತ್ತು. ಸದ್ಯ, ಅದೇ ಶೀರ್ಷಿಕೆಯೊಂದಿಗೆ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಚಿತ್ರ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಯುವ ನಿರ್ದೇಶಕ ಸಂತೋಷ್ ಗೋಪಾಲ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಶುಭಮಂಗಳ' ಟೈಟಲ್ ಅನ್ನು ಹಿರಿಯ ನಿರ್ದೇಶಕ ಭಗವಾನ್ ಬಿಡುಗಡೆ ಮಾಡಿದ್ದಾರೆ. ಹಳೆಯ`ಶುಭಮಂಗಳ'ಕ್ಕೂ ಈಗಿನ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.