ಕರ್ನಾಟಕ

karnataka

ETV Bharat / sitara

ಮೂಕ ಪ್ರಾಣಿಗಳ ಹಸಿವು ನೀಗಿಸುತ್ತಿದ್ದಾರೆ ನಟಿ ಮೇಘಾ ಶೆಟ್ಟಿ - ಬೀದಿ ನಾಯಿಗಳಿಗೆ ಆಹಾರ ನೀಡಿದ ನಟಿ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ನಟಿಸುತ್ತಿರುವ ಮೇಘಾ ಶೆಟ್ಟಿ ಅವರು ರಸ್ತೆ ಬದಿಗಳಲ್ಲಿ ನಾಯಿಗಳಿಗೆ ಆಹಾರವನ್ನು ನೀಡುವುದರ ಮೂಲಕ ಹಸಿವು ನೀಗಿಸಿದ್ದಾರೆ.

actress Megha shetty
ಜೊತೆ ಜೊತೆಯಲಿ ಧಾರಾವಾಹಿ ನಟಿ ಮೇಘಾ ಶೆಟ್ಟಿ

By

Published : May 23, 2021, 1:06 PM IST

ವರ್ಕ್ ಔಟ್, ಡ್ಯಾನ್ಸ್ ಅಷ್ಟೇ ಅಲ್ಲದೆ ಮೂಕ ಪ್ರಾಣಿಗಳ ಸಂಕಷ್ಟಕ್ಕೂ ಮಿಡಿದಿದ್ದಾರೆ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ. ಹೌದು, ಮೇಘಾ ಅವರು ತಮ್ಮ ಮನೆಯ ಬಳಿಯಿರುವ ಬೀದಿ ನಾಯಿಗಳಿಗೆ ಆಹಾರವನ್ನು ನೀಡುತ್ತಿದ್ದಾರೆ.

ಇತ್ತೀಚೆಗೆ ಅವರು ಬೀದಿ ನಾಯಿಗೆ ಆಹಾರ ನೀಡುತ್ತಿರುವ ಫೋಟೋವೊಂದು ಗಮನ ಸೆಳೆದಿತ್ತು. ಲಾಕ್​ಡೌನ್ ಕಾರಣ ಹೋಟೆಲ್​​ಗಳು, ಅಂಗಡಿಗಳು ಮುಚ್ಚಲ್ಪಟ್ಟಿರುವುದರಿಂದ ನಾಯಿಗಳು ಆಹಾರಕ್ಕಾಗಿ ಹೆಣಗಾಡುತ್ತಿವೆ. ಈ ನಾಯಿಗಳು ಬದುಕುಳಿಯಲು ಕಸದ ತೊಟ್ಟಿಯಲ್ಲಿ ಬಿದ್ದಿರುವ ಆಹಾರವನ್ನು ಅವಲಂಬಿಸಿವೆ.

ಬೀದಿ ನಾಯಿಗಳಿಗೆ ಆಹಾರ ನೀಡಿದ ನಟಿ ಮೇಘಾ ಶೆಟ್ಟಿ

ಪ್ರಾಣಿಗಳು ಹಸಿವಿನಿಂದ ಬಳಲುತ್ತಿರುವುದನ್ನು ಗಮನಿಸಿದ ನಟಿ ಮೇಘಾ, ತಮ್ಮ ಕೈಲಾದಷ್ಟು ಈ ಮೂಕ ಪ್ರಾಣಿಗಳಿಗೆ ಸಹಾಯ ಮಾಡುತ್ತಿದ್ದಾರೆ. ರಸ್ತೆ ಬದಿಗಳಲ್ಲಿ ನಾಯಿಗಳಿಗೆ ಆಹಾರವನ್ನು ನೀಡುತ್ತಿದ್ದಾರೆ. ಕಳೆದ ವರ್ಷ ಲಾಕ್​​​ಡೌನ್ ಆದ ಸಂದರ್ಭದಲ್ಲೂ ಮೇಘಾ ಅವರು ನಾಯಿಗಳಿಗೆ ಆಹಾರವನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜ್ಯದಲ್ಲಿ ಲಾಕ್​​ಡೌನ್ ಆದ ನಂತರ ನಟಿ ಮೇಘಾ ಶೆಟ್ಟಿ ತಮ್ಮ ಇನ್​ಸ್ಟಾಗ್ರಾಂ ಪೇಜ್​​ನಲ್ಲಿ ವರ್ಕ್ ಔಟ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆಗಾಗ ಹೊಸ ಹೊಸ ಫೋಟೋ ಮತ್ತು ವಿಡಿಯೋಗಳನ್ನು ಅಪ್​ಲೋಡ್ ಮಾಡುತ್ತಲೇ ಇರುತ್ತಾರೆ. ಈ ಕೊರೊನಾ ಸಮಯದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಲು ವರ್ಕ್ ಔಟ್ ಮಾಡುವ ಮೂಲಕ ಆ್ಯಕ್ಟೀವ್ ಆಗಿರುವ ಮೇಘಾ ಅವರು, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ.

ಜೊತೆ ಜೊತೆಯಲಿ ಧಾರಾವಾಹಿ ನಟಿ ಮೇಘಾ ಶೆಟ್ಟಿ

ಇದನ್ನೂ ಓದಿ:ನಾನು ಸಿಎಂ ಆಗ್ಬೇಕು, ಚುನಾವಣೆಗೆ ಸ್ಪರ್ಧಿಸಿದ್ರೆ ಗೆಲ್ಲಿಸ್ತೀರಾ?: ಜನರಿಗೆ ನಟ ಉಪೇಂದ್ರ ಪ್ರಶ್ನೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ನಟಿಸುತ್ತಿರುವ ಮೇಘಾ, ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ‘ತ್ರಿಬಲ್ ರೈಡಿಂಗ್’ ಎಂಬ ರೊಮ್ಯಾಂಟಿಕ್ ಚಿತ್ರದಲ್ಲೂ ಮೇಘಾ ನಟಿಸುತ್ತಿದ್ದಾರೆ.

ABOUT THE AUTHOR

...view details