ಹೈದರಾಬಾದ್: ಬಹುಭಾಷಾ ಖ್ಯಾತ ನಟಿ ಮೀನಾ ಹಾಗೂ ಕುಟುಂಬದ ಎಲ್ಲರಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಈ ಕುರಿತ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ನೀವೆಲ್ಲಾ ಎಚ್ಚರಿಕೆಯಿಂದಿರಿ ಎಂದು ಅವರು ಮನವಿ ಮಾಡಿದ್ದಾರೆ.
'2022ರಲ್ಲಿ ನಮ್ಮ ಮನೆಗೆ ಬಂದ ಮೊದಲ ಅತಿಥಿ ಕೊರೊನಾ. ಇದಕ್ಕೆ ನಮ್ಮ ಇಡೀ ಕುಟುಂಬ ಇಷ್ಟವಾಗಿದೆ. ಆದರೆ ಅದನ್ನು ನಮ್ಮ ಮನೆಯಲ್ಲಿರಲು ಬಿಡುವುದಿಲ್ಲ. ನೀವೆಲ್ಲರೂ ಜಾಗರೂಕರಾಗಿರಿ, ಜವಾಬ್ದಾರಿಯಿಂದ ವರ್ತಿಸಿ. ಕೋವಿಡ್ ಹರಡಬೇಡಿ' ಎಂದು ಮನವಿ ಮಾಡಿದ್ದಾರೆ.