ಕೃಷ್ಣ ಲೀಲಾ, ಇಷ್ಟಕಾಮ್ಯ, ಗಣಪ, ರುಸ್ತುಂ ಸಿನಿಮಾಗಳ ಮೂಲಕ ತಮ್ಮದೇ ಐಡೆಂಟಿಟಿಯನ್ನ ಕ್ರಿಯೇಟ್ ಮಾಡಿಕೊಂಡವರು ನಟಿ ಮಯೂರಿ ಕ್ಯಾತರಿ. ಕೆಲವು ತಿಂಗಳ ಹಿಂದೆ ಬಹುಕಾಲದ ಗೆಳೆಯ ಅರಣ್ ಜೊತೆ ಸಪ್ತಪದಿ ತುಳಿದಿದ್ರು. ಈಗ ದೀಪಾವಳಿ ಹಬ್ಬದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಬಹುಕಾಲದ ಗೆಳೆಯ ಅರಣ್ ಜೊತೆ ಮದುವೆ ಬಳಿಕ ಗುಡ್ ನ್ಯೂಸ್ ಕೊಟ್ಟ ಕೃಷ್ಣ ಲೀಲಾ ಮಯೂರಿ! - Krishna Leela Mayuri Photoshoot
ಬಹುಕಾಲದ ಗೆಳೆಯ ಅರಣ್ ಜೊತೆ ಸಪ್ತಪದಿ ತುಳಿದಿದ್ದ ನಟಿ ಮಯೂರಿ ಕ್ಯಾತರಿ ಗುಡ್ ನ್ಯೂಸ್ ನೀಡಿದ್ದಾರೆ.
ಕೃಷ್ಣ ಲೀಲಾ ಮಯೂರಿ
ಈ ಬೆಳಕಿನ ಹಬ್ಬದ ದಿನದಂದು ಮೊದಲ ಮಗುವಿನ ನಿರೀಕ್ಷೆಯ ಸಂತಸವನ್ನ ರಿವೀಲ್ ಮಾಡಿದ್ದಾರೆ. ಈ ವಿಷಯ ತಿಳಿಸಲು ಮಯೂರಿ ಕ್ಯಾತರಿ ತಮ್ಮ ಪತಿ ಜೊತೆ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಕಲರ್‌ಫುಲ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಾವು ಗರ್ಭಿಣಿಯಾಗಿರುವ ವಿಷಯವನ್ನು ತಿಳಿಸಿದ್ದಾರೆ.
ಜೂನ್ 12ರಂದು ಅರುಣ್ ಜೊತೆ ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಯೂರಿ ಹಸೆಮಣೆ ಏರಿದ್ರು.
Last Updated : Nov 14, 2020, 5:19 PM IST