ಗೆಳೆಯರಿಬ್ಬರ ಹೊಡೆದಾಟ ಪ್ರಕರಣದಿಂದ ಬೇಸತ್ತ ನಟಿ ರಾಗಿಣಿ ದ್ವಿವೇದಿ ಯಾರಿಗೂ ಸಿಗದೆ ರಾತ್ರೋ ರಾತ್ರಿ ದುಬೈಗೆ ಹಾರಿದ್ದಾರೆ ಎನ್ನಲಾಗುತ್ತಿದೆ.
ಗೆಳೆಯರ ಹೊಡೆದಾಟ: ಬೇಸತ್ತು ದುಬೈಗೆ ಹಾರಿದ್ರಾ ತುಪ್ಪದ ಬೆಡಗಿ? - undefined
ಪ್ರೇಮಿಗಳಿಬ್ಬರ ಹೊಡೆದಾಟಕ್ಕೆ ಬೇಸತ್ತ ನಟಿ ಯಾರಿಗೂ ಸಿಗದೆ ದುಬೈಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಖಾಸಗಿ ಹೋಟೆಲ್ನಲ್ಲಿ ನಟಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರೇಮಿಗಳು ಆಕೆಯ ಎದುರಲ್ಲೇ ಹೊಡೆದಾಡಿಕೊಂಡಿದ್ದರು.

ನಟಿ ದುಬೈಗೆ ಹೋಗಿದ್ದಾರೆ ಎಂದು ಅವರ ಮನೆಯ ಸೆಕ್ಯೂರಿಟಿ ಮಾಧ್ಯಮದವರಿಗೆ ತಿಳಿಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ರಾಗಿಣಿ ವಿಚಾರವಾಗಿ ಇಬ್ಬರು ಜಗಳವಾಡಿದ್ದರು ಎಂಬ ಮಾಹಿತಿ ಹೊರಬರುತ್ತಿದ್ದಂತೆ ನಟಿ ಯಾರಿಗೂ ಕಾಣದಂತೆ ದುಬೈಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಆರ್ಟಿಓ ಅಧಿಕಾರಿ ರವಿ ಮೇಲೆ ಶಿವ ಪ್ರಕಾಶ್ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಆದರೆ ಇದುವರೆಗೂ ಘಟನೆ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಗಿಣಿ ಮುಂದೆಯೇ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಮೂವರೂ ಶೀಘ್ರದಲ್ಲೇ ಪ್ರೆಸ್ಮೀಟ್ ಮಾಡುತ್ತೇನೆ ಎಂದು ಹೇಳಿದ್ದ ಶಿವಪ್ರಕಾಶ್ ಕೂಡಾ ಕಾಣುತ್ತಿಲ್ಲ, ಯಾವ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.