ಕರ್ನಾಟಕ

karnataka

ETV Bharat / sitara

ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಟಗರು ಪುಟ್ಟಿಯ ಟ್ರಿಬ್ಯುಟ್ - undefined

ಸ್ಯಾಂಡಲ್​ವುಡ್​​​ಲ್ಲಿ ತಮ್ಮ ಮೊದಲ ಚಿತ್ರದಲ್ಲೇ ಯಶಸ್ಸು ಕಂಡ ನಟಿ ಮಾನ್ವಿತಾ ಹರೀಶ್. ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ವಿಶೇಷ ಆಲ್ಬಂ ಸಾಂಗ್​​ಲ್ಲಿ ಹೆಜ್ಜೆ ಹಾಕೋಕೆ ಅವರು ರೆಡಿಯಾಗಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Jun 17, 2019, 4:24 PM IST

ದೇಶಕ್ಕಾಗಿ ಮಡಿದ ಯೋಧರಿಗೆ ನಮನ ಸಲ್ಲಿಸೋ ವಿಶೇಷ ಹಾಡೊಂದಕ್ಕೆ ಬಾಲಿವುಡ್​​ನ​ ಖ್ಯಾತ ಕೊರಿಯೋಗ್ರಾಫರ್​ ಗಣೇಶ್ ಆಚಾರ್ಯ ಡ್ಯಾನ್ಸ್ ಕಂಪೋಸ್​ ಮಾಡ್ತಿದ್ದಾರೆ. ಈ ಸ್ಪೆಷಲ್ ಸಾಂಗ್​ನಲ್ಲಿ ಕೃಷ್ಣ ಅಭಿಷೇಕ್ ಮತ್ತು ಮಾನ್ವಿತಾ ಸ್ಟೆಪ್ ಹಾಕಲಿದ್ದಾರೆ. ಟಗರು ಪುಟ್ಟಿಗೆ ಗಣೇಶ್​ ಕೊರಿಯೋಗ್ರಾಫ್​ಲ್ಲಿ ನಟಿಸಬೇಕು ಅನ್ನೋದು ಬಹುವರ್ಷಗಳ ಕನಸಾಗಿತ್ತು. ಇದೀಗ ಅದು ಈಡೇರಿದೆ.

ಇನ್ನು ಕಳೆದ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರರ ಅಟ್ಟಹಾಸದಿಂದ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ರು. ಇದೀಗ ಅವರಿಗೆ ಗೌರವ ಸಲ್ಲಿಸೋ ವಿಶೇಷ ಹಾಡೊಂದು ಬಾಲಿವುಡ್​​ಲ್ಲಿ ರೆಡಿಯಾಗ್ತಿದೆ.

For All Latest Updates

TAGGED:

ABOUT THE AUTHOR

...view details