ಕರ್ನಾಟಕ

karnataka

ETV Bharat / sitara

ಸಿನಿಮಾವೊಂದರ ಪಾತ್ರಕ್ಕಾಗಿ ಕಳರಿಪಯಟ್ಟು ಕಲಿಯುತ್ತಿರುವ ಲಾಸ್ಯ ನಾಗರಾಜ್​

ಸಿನಿಮಾ ನಟ-ನಟಿಯರು ಕುದುರೆ ಸವಾರಿ, ಕರಾಟೆ ಹಾಗೂ ಇನ್ನಿತರ ವಿದ್ಯೆಗಳನ್ನು ಕಲಿಯುವುದು ಸಾಮಾನ್ಯ. ಬಿಗ್​ಬಾಸ್ ಖ್ಯಾತಿಯ ಲಾಸ್ಯ ನಾಗರಾಜ್ ಕೂಡಾ ಸಿನಿಮಾಗಾಗಿ ಕೇರಳದ ಕಳರಿಪಯಟ್ಟು ಸಾಂಪ್ರದಾಯಿಕ ಕಲೆಯನ್ನು ಕಲಿಯುತ್ತಿದ್ದಾರಂತೆ.

ಲಾಸ್ಯ

By

Published : Apr 29, 2019, 10:07 AM IST

ಒಂದು ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುವ ಮುನ್ನ ಸಾಕಷ್ಟು ಕಲಾವಿದರು ಆ ಪಾತ್ರಕ್ಕೆ ಬೇಕಾದ ವಿಚಾರಗಳನ್ನು ಕಲಿತು ಬಂದಿರುತ್ತಾರೆ. ಪಾತ್ರಕ್ಕೆ ಜೀವ ತುಂಬಲು ಹೋಂ ವರ್ಕ್ ಬಹಳ ಅಗತ್ಯ.

ಆದರೆ ಈ ಕಳರಿಪಯಟ್ಟು ಸಮರ ಕಲೆ ಕಲಿಯಲು ಬಹಳ ಶ್ರಮ ಹಾಗೂ ಶಿಸ್ತು ಬೇಕು. ಕನ್ನಡ ನಟಿಯರ ಪೈಕಿ ಈ ವಿದ್ಯೆ ಕಲಿತವರು ಬಹಳ ಕಡಿಮೆ. ಇತ್ತೀಚಿಗೆ ಸಂಜನಾ ಗಲ್ರಾಣಿ ತೆಲುಗು ಧಾರಾವಾಹಿಗಾಗಿ ಕತ್ತಿವರಸೆ ಕಲಿತಿದ್ದರು. 'ಚಂದ್ರ' ಸಿನಿಮಾಗಾಗಿ ದಕ್ಷಿಣ ಭಾರತದ ಬೆಡಗಿ ಶ್ರೀಯ ಶರಣ್ ಅವರಿಗೆ ಕಳರಿಪಯಟ್ಟು ಕಲೆ ಕಲಿಸಿ ಕ್ಯಾಮರಾ ಮುಂದೆ ತಂದಿದ್ದರು ನಿರ್ದೇಶಕಿ ರೂಪಾ ಅಯ್ಯರ್.

ಲಾಸ್ಯ ನಾಗರಾಜ್​​​

ಇದೀಗ ಕನ್ನಡದಲ್ಲಿ ಈ ಕಳರಿಪಯಟ್ಟು ಸಮರ ಕಲೆ ಕಲಿಯಲು ಲಾಸ್ಯ ನಾಗರಾಜ್ ಎಂಬ ಬೆಡಗಿ ಸಿದ್ಧವಾಗುತ್ತಿದ್ದಾರೆ. ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಚಿತ್ರದಲ್ಲಿ ನಾಯಕಿ ಅಧಿತಿ ಪ್ರಭುದೇವ್ ಅವರ ಸ್ನೇಹಿತೆಯ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ಅದಕ್ಕೆ ಕಳರಿಪಯಟ್ಟು ಅವಶ್ಯಕತೆ ಇರುವುದರಿಂದ ಲಾಸ್ಯ ಕಳರಿಪಯಟ್ಟು ತರಬೇತಿ ಪಡೆಯುತ್ತಿದ್ದಾರಂತೆ.

ಲಾಸ್ಯ ನಾಗರಾಜ್ ಮೂಲತಃ ಭರತನಾಟ್ಯ ಹಾಗೂ ಕಥಕ್ ಪ್ರವೀಣೆ. ಕಿರುತೆರೆಯಲ್ಲಿ ಪದ್ಮಾವತಿ ಧಾರಾವಾಹಿಯಲ್ಲಿ ನಟಿಸಿದ ನಂತರ 'ಅಸತೋಮ ಸದ್ಗಮಯ' ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ದೊರೆಯಿತು. ಈ ಚಿತ್ರದ ಬಳಿಕ 'ಯು ಟರ್ನ್', 'ಕಾಫಿತೋಟ' ಸಿನಿಮಾಗಳಲ್ಲಿ ಲಾಸ್ಯ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಲಾಸ್ಯ ನಾಗರಾಜ್ ಬಿಗ್​​​​​​ಬಾಸ್ ಮನೆಯಲ್ಲಿ 57 ದಿನಗಳ ಕಾಲ ಇದ್ದರು. ಉಪೇಂದ್ರ ಜೊತೆ 'ಹೋಂ ಮಿನಿಸ್ಟರ್'​​​ ಹಾಗೂ 'ಮಂಗಳವಾರ ರಜಾದಿನ' ಸಿನಿಮಾಗಳಲ್ಲೂ ಲಾಸ್ಯ ನಟಿಸಿದ್ದು, ಈ ಸಿನಿಮಾಗಳು ಬಿಡುಗಡೆಯಾಗಬೇಕಿದೆ.

For All Latest Updates

TAGGED:

ABOUT THE AUTHOR

...view details