ಕರ್ನಾಟಕ

karnataka

ETV Bharat / sitara

Happy Birthday Lakshmi: ಚಂದನದ ಗೊಂಬೆಗೆ ಹುಟ್ಟುಹಬ್ಬದ ಸಂಭ್ರಮ - julie Lakshmi

ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಲಕ್ಷ್ಮಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

Lakshmi
Lakshmi

By

Published : Dec 13, 2021, 7:29 AM IST

Updated : Dec 13, 2021, 9:00 AM IST

ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟಿ, ಕನ್ನಡದ ಹಿರಿಯ ಕಲಾವಿದೆ ಲಕ್ಷ್ಮಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನ್ಮ ದಿನದ ಆಚರಣೆಯಲ್ಲಿರುವ ಎವರ್​ ಗ್ರೀನ್​ ನಟಿ ಲಕ್ಷ್ಮಿ ಅವರಿಗೆ ಶುಭಾಶಯಗಳು.

ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ಕಲಾವಿದೆ, 13 ಡಿಸೆಂಬರ್ 1952 ರಲ್ಲಿ ಜನಿಸಿದರು. ಇವರ ತಂದೆ ಕನ್ನಡದ ಮೊದಲ ಚಿತ್ರ 'ಸತಿ ಸುಲೋಚನಾ' ದ ನಿರ್ದೇಶಕ ವೈ.ವಿ. ರಾವ್ ಮತ್ತು ತಾಯಿ ಹೆಸರಾಂತ ತಮಿಳು ಕಲಾವಿದೆ ಕುಮಾರಿ ರುಕ್ಮಿಣಿ. ಅಷ್ಟೇ ಅಲ್ಲದೆ ಇವರ ಮೂಲ ಹೆಸರು ಯರಗುಡಿಪಾಡಿ ವೆಂಕಟ ಮಹಾಲಕ್ಷ್ಮಿ.

1961 ರಲ್ಲಿ 'ಶ್ರೀ ವಲ್ಲಿ' ಎಂಬ ತಮಿಳು ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, 1968 ರಲ್ಲಿ ತಮಿಳು ಸಿನಿಮಾ 'ಜೀವನಾಂಶ'ದಲ್ಲಿ ನಟಿಯಾಗಿ ಮೊದಲ ಬಾರಿಗೆ ಮಿಂಚಿದರು. ಆದರೆ ಅವರು ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದು 1975 ರಲ್ಲಿ ತೆರೆಗೆ ಬಂದ ' ಜ್ಯೂಲಿ' ಚಿತ್ರದಿಂದ.

ನಟಿ ಲಕ್ಷ್ಮಿ

ಕೇವಲ ಸಿನಿಮಾ ಮಾತ್ರವಲ್ಲದೇ, ಸಿನಿಮಾ ಹೊರತಾದ ಚಟುವಟಿಕೆಯಿಂದಲೂ ಲಕ್ಷ್ಮಿ ಸಾಕಷ್ಟು ಪ್ರಸಿದ್ಧರಾದವರು. ಕನ್ನಡದಲ್ಲಿ 'ಕತೆಯಲ್ಲ, ಜೀವನ', ಅದಕ್ಕೂ ಮೊದಲು ತಮಿಳಿನಲ್ಲಿ 'ಅಚ್ಚುಮಿಲೈ ಅಚ್ಚುಮಿಲೈ' ಕಾರ್ಯರ್ಕ್ರಮದ ಮೂಲಕ ಸಾಮಾಜಿಕ ಕಳಕಳಿ ಮೆರೆದರು.

ಕನ್ನಡದ ಸಿನಿಮಾಗಳಾದ 'ಗೋವಾದಲ್ಲಿ ಸಿಐಡಿ 999', 'ವಂಶಿ', 'ಅಂತಾ', 'ಟೋನಿ', 'ಓಲವು ಮೂಡಿದಾಗ', 'ನಾನೊಬ್ಬ ಕಳ್ಳ', 'ಗಾಳಿ ಮಾತು', 'ನಾ ನಿನ್ನ ಮರೆಯಲಾರೆ', 'ಓಲವು ಗೆಲುವು', 'ಚಂದನದ ಗೊಂಬೆ', 'ಬಂಗಾರದ ಬದುಕು', 'ನನ್ನವರು', 'ಕುಂಕುಮ ಭಾಗ್ಯ', 'ಬುದ್ಧಿವಂತ', 'ತ್ರಿಕೋನ' ಸೇರಿದಂತೆ ಅನೇಕ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ವಿವಿಧ ಭಾಷೆಗಳಲ್ಲಿ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ಅಭಿಮಾನಿಗಳನ್ನು ರಂಜಿಸಿದ ಲಕ್ಷ್ಮಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 9 ಫಿಲ್ಮ್‌ಫೇರ್ ಪ್ರಶಸ್ತಿಗಳು, ಮೂರು ನಂದಿ ಪ್ರಶಸ್ತಿಗಳು, 'ಹೂವು ಹಣ್ಣು' ಚಲನಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿಗಳು ಲಭಿಸಿವೆ.

Last Updated : Dec 13, 2021, 9:00 AM IST

ABOUT THE AUTHOR

...view details