ಕರ್ನಾಟಕ

karnataka

ETV Bharat / sitara

ಬಾಲ ನಟಿಯಾಗಿ ಕಿರುತೆರೆಗೆ ಬಂದ ಕೃತಿಕಾ ಇಂದಿಗೂ ಪ್ರೇಕ್ಷಕರ ರಾಧೆ - Sandalwood

ರಾಧಾ ಕಲ್ಯಾಣ ಧಾರಾವಾಹಿಯ ರಾಧೆಯಾಗಿ ಜನ ಮೆಚ್ಚುಗೆ ಪಡೆದಿದ್ದ ನಟಿ ಕೃತಿಕಾ ಬೆಳ್ಳಿತೆರೆಯಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಅಷ್ಟೇ ಅಲ್ಲ ಇವರು ಹಲವು ಸಿನಿಮಾಗಳಲ್ಲಿ‌‌ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಶಾರ್ದೂಲ ಎಂಬ ಹೊಸ ಸಿನಿಮಾಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

Krutika
Krutika

By

Published : Jul 20, 2020, 2:13 PM IST

ಕಿರುತೆರೆಯ ಮೂಲಕ ಬಣ್ಣದ ಜಗತ್ತಿಗೆ ಬಂದ ಹಲವು ಪ್ರತಿಭೆಗಳು ಇಂದು ಹಿರಿತೆರೆಯಲ್ಲಿ ಮಿಂಚುತ್ತಿವೆ. ಆ ಪೈಕಿ ಮಲೆನಾಡಿನ ಕುವರಿ ಕೃತಿಕಾ ರವೀಂದ್ರ ಕೂಡಾ ಒಬ್ಬರು. ಜಿಂಬಾ ಧಾರಾವಾಹಿಯಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ್ದ ಕೃತಿಕಾ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆಮಗಳು ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ಝೀ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಾಯಕಿ ರಾಧಿಕಾಳಾಗಿ ಅಭಿನಯಿಸಿದ್ದರು. ಹೀಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಕೃತಿಕಾ ಇಂದಿಗೂ ವೀಕ್ಷಕರ ಪಾಲಿನ ಪ್ರೀತಿಯ ರಾಧೆಯಾಗಿದ್ದಾರೆ.

ನಟಿ ಕೃತಿಕಾ
ಅಪ್ಪ ಡಾ.ರವೀಂದ್ರ ಮತ್ತು ಅಮ್ಮ ಮೀನಾಕೃತಿ ಮುದ್ದಿನ ಮಗಳಾದ ಕೃತಿಕಾಳನ್ನ ಬಣ್ಣದ ಲೋಕ ಕೈ ಬೀಸಿ ಕರೆಯಿತು‌. ಮನೆಯಲ್ಲಿ ಬಣ್ಣದ ವಾತಾವರಣವೇನೂ ಇಲ್ಲ ನಿಜ. ಆದರೆ, ಮಗಳ ಆಸೆಯನ್ನು ಒಪ್ಪಿದ ಹೆತ್ತವರು ಅಸ್ತು ಎಂದರು. ಅಂತೆಯೇ ಅವರ ಕಲಾ ಪಯಣ ಆರಂಭವಾಯಿತು.
ನಟಿ ಕೃತಿಕಾ
ರಾಧಿಕಾಳಾಗಿ ಬದಲಾಗಿದ್ದ ಅವರು ಬಿಗ್ ಬಾಸ್ ಸ್ಪರ್ಧಿಯಾದ ಬಳಿಕ ಕೃತಿಕಾರಾಗಿ ಜನರಿಗೆ ಪರಿಚಯವಾದರು. ಬಿಗ್ ಬಾಸ್ ಸೀಸನ್ 3 ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟ ಕೃತಿಕಾರ ವೃತ್ತಿ ಬದುಕು ಮಾತ್ರವಲ್ಲದೇ ವೈಯಕ್ತಿಕ ಬದುಕೂ ಟರ್ನ್ ಪಡೆದುಕೊಂಡಿತು.
Krutika
ಪಟ್ರೆ ಲವ್ಸ್ ಪದ್ಮ ಸಿನಿಮಾದಲ್ಲಿ ನಾಯಕಿಯಾಗಿ ಬೆಳ್ಳೆತೆರೆಗೆ ಕಾಲಿಟ್ಟ ಮಲೆನಾಡ ಚೆಲುವೆ ಮುಂದೆ ಆಟೋ, ಲಿಫ್ಟ್ ಕೊಡ್ಲಾ, ಯಾರಿಗೆ ಯಾರುಂಟು ಸಿನಿಮಾದಲ್ಲಿ ನಟಿಸಿದರು. ಇನ್ನು ನಾಯಕಿ ಪ್ರಧಾನ ಸಿನಿಮಾದಲ್ಲಿಯೂ ಮಿಂಚಿದ ಇವರು, ಇದೀಗ ಶಾರ್ದೂಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ನಟಿ ಕೃತಿಕಾ

ABOUT THE AUTHOR

...view details