ಕರ್ನಾಟಕ

karnataka

ETV Bharat / sitara

20 ಕೆಜಿ ತೂಕ ಇಳಿಸಿದ ಖುಷ್ಬೂ ಸುಂದರ್: ನಟಿಯ ಹೊಸ ಲುಕ್​​ಗೆ ನೆಟ್ಟಿಗರು ಫಿದಾ

ದಕ್ಷಿಣ ಭಾರತದ ಖ್ಯಾತ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡಿದ್ದು, ಅಂದಿನ ಹಾಗೂ ಇಂದಿನ ಫೋಟೋಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

Khushbu Sundar
ಖುಷ್ಬೂ ಸುಂದರ್

By

Published : Dec 5, 2021, 4:33 PM IST

Updated : Dec 5, 2021, 4:58 PM IST

ತೂಕ ಇಳಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ದಕ್ಷಿಣ ಭಾರತದ ಖ್ಯಾತ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಹೊಸ ಲುಕ್​ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಬಗ್ಗೆ ಟ್ವಿಟರ್​ನಲ್ಲಿ ತಮ್ಮ ಅಂದಿನ ಹಾಗೂ ಇಂದಿನ ಫೋಟೋಗಳನ್ನು ಖುಷ್ಬೂ ಹಂಚಿಕೊಂಡಿದ್ದಾರೆ. "ನಾನು ಅತ್ಯುತ್ತಮ ಆರೋಗ್ಯವಂತಳಾಗಿದ್ದೇನೆ. ಆರೋಗ್ಯವೇ ಸಂಪತ್ತು ಎಂಬುದು ನೆನಪಿರಲಿ. ನೀವು ಅನಾರೋಗ್ಯದಿಂದ ಬಳಲುತ್ತಿದ್ದೇನಾ ಎಂದು ಕೇಳುವವರಿದ್ದರೆ ನಿಮ್ಮ ಕಾಳಜಿಗೆ ಧನ್ಯವಾದಗಳು. ನಾನು ಹಿಂದೆಂದೂ ಇಷ್ಟು ಫಿಟ್ ಆಗಿರಲಿಲ್ಲ" ಎಂದು ನಟಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಧೋನಿ ಮತ್ತು ನನ್ನ ನಡುವಿನ ಸಂಬಂಧ ಒಂದು ಕಲೆ: ನಟಿ ಲಕ್ಷ್ಮಿ ರೈ

ಈ ಫೋಟೋಗಳನ್ನು ಕಂಡ ಕೆಲವರು ನಟಿಯ ಸೌಂದರ್ಯವನ್ನು ಹೊಗಳಿದ್ದು, ಇನ್ನೂ ಕೆಲವರು ತೂಕ ಇಳಿಸಿಕೊಳ್ಳಲು ಟಿಪ್ಸ್ ಕೊಡಿ ಅಂತಾ ಕೇಳಿದ್ದಾರೆ. ಇದಕ್ಕೆ ಖುಷ್ಬೂ, ಹಾರ್ಡ್ ವರ್ಕ್ ಮತ್ತು ಡಯಟ್ ಜೊತೆಗೆ ವರ್ಕ್ ಔಟ್ ಮಾಡಿ ಎಂದು ಉತ್ತರ ನೀಡಿದ್ದಾರೆ.

Last Updated : Dec 5, 2021, 4:58 PM IST

ABOUT THE AUTHOR

...view details