ಕರ್ನಾಟಕ

karnataka

ETV Bharat / sitara

ನನ್ನ ಫೇವರಿಟ್ ಹೀರೋ ಸುದೀಪ್ ಸಾರ್ ಎಂದ ನಟಿ ಕಾವ್ಯ ಶೆಟ್ಟಿ! - kavya shetty kannada cenema

ಲಂಕೆ ಸಿನಿಮಾದಲ್ಲಿ,ವೇಶ್ಯಾವಾಟಿಕೆಯಂತಹ ಬೋಲ್ಡ್ ಪಾತ್ರವನ್ನ ಮಾಡುವ ಮೂಲಕ ನಟಿ ಕಾವ್ಯ ಶೆಟ್ಟಿ ಗಮನ ಸೆಳೆದಿದ್ದಾರೆ‌. ಇನ್ನು ಕಿಚ್ಚ ಸುದೀಪ್​ ನನ್ನ ಫೇವರಿಟ್​ ಹೀರೋ ಅವರ ಜೊತೆ ಸಿನಿಮಾ ಮಾಡೋದು ನನ್ನ ಬಹುದೊಡ್ಡ ಆಸೆ ಎಂದು ಇಷ್ಟಕಾಮ್ಯ ಬೆಡಗಿ ಕಾವ್ಯ ಶೆಟ್ಟಿ ತಮ್ಮ ಮನದಾಳ ತೆರೆದಿಟ್ಟಿದ್ದಾರೆ.

actress kavya shetty wants to act with kiccha sudeep
ನಟಿ ಕಾವ್ಯ ಶೆಟ್ಟಿ

By

Published : Sep 11, 2021, 7:54 PM IST

ಸಿನಿಮಾ ಎಂಬ ಬಣ್ಣದ ಲೋಕದಲ್ಲಿ, ಸಿನಿಮಾ ಹಿನ್ನೆಲೆ ಇಲ್ಲದೆ ಅದೆಷ್ಟೋ ಕಲಾವಿದರು, ಸ್ಟಾರ್​ಗಳಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚುತ್ತಿದ್ದಾರೆ. ಈ ಸಾಲಿನಲ್ಲಿ ಮಂಗಳೂರಿನ ಹುಡುಗಿ ಕಾವ್ಯ ಶೆಟ್ಟಿ ಕೂಡ ಸೇರ್ತಾರೆ. ಮಾಡೆಲಿಂಗ್ ಮಾಡ್ತಾ, 'ನಮ್ ದುನಿಯಾ ನಮ್‌ ಸ್ಟೈಲ್' ಸಿನಿಮಾ ಮೂಲಕ, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ಕಾವ್ಯ.

ಸ್ಯಾಂಡಲ್​​ವುಡ್​​ನಲ್ಲಿ ವಿಭಿನ್ನ ಪಾತ್ರಗಳನ್ನ‌ ಮಾಡ್ತಾ, ಈಗ ಮಲೆಯಾಳಂ ಸಿನಿಮಾ‌ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಸದ್ಯ ಲಂಕೆ ಸಿನಿಮಾದಲ್ಲಿ, ವೇಶ್ಯಾವಾಟಿಕೆಯಂತಹ ಬೋಲ್ಡ್ ಪಾತ್ರವನ್ನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ‌.

ಸದ್ಯ ಮಲಯಾಳಂನಲ್ಲೂ ನಟನೆ

ಈ ಪಾತ್ರದ ಬಗ್ಗೆ ಕಾವ್ಯ ಶೆಟ್ಟಿ ಹೇಳೋದು ಹೀಗೆ....ನಾನು ಮಾಡಿರೋ‌ ಸಿನಿಮಾ ಪಾತ್ರಗಳಿಗಿಂತ, ಈ ಕ್ಯಾರೆಕ್ಟರ್ ತುಂಬಾ ಚಾಲೆಂಜಿಂಗ್ ಆಗಿತ್ತು‌. ಈ‌ ಕಾರಣಕ್ಕೆ ಈ‌ ಪಾತ್ರವನ್ನ‌ ಒಪ್ಪಿಕೊಂಡೆ. ಈ‌ ಪಾತ್ರಕ್ಕೆ ಅನುಪಮಾ ಗೌಡ ಡಬ್ಬಿಂಗ್ ಮಾಡಿದ್ದಾರೆ, ತುಂಬಾನೇ ಖುಷಿ ಅಂತಾರೆ.

ಮನದಾಸೆ ತೆರೆದಿಟ್ಟ ನಟಿ ಕಾವ್ಯ ಶೆಟ್ಟಿ

ಇನ್ನು ಕಡಿಮೆ ಸಮಯದಲ್ಲಿ, ಕನ್ನಡ ಚಿತ್ರರಂಗದ ಶೋ‌ ಮ್ಯಾನ್ ಅಂತಾ ಕರೆಯಿಸಿಕೊಂಡಿರುವ ರವಿಚಂದ್ರನ್ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಕಾವ್ಯ ಶೆಟ್ಟಿ, ರವಿ ಬೋಪಣ್ಣ ಸಿನಿಮಾಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಯಾಕೆಂದರೆ ಅಂತಹ ಸ್ಟಾರ್ ಹೀರೋ ಜೊತೆ ನಟಿಸುವ ಅವಕಾಶ ಯಾರಿಗೂ ಸಿಗಲ್ಲ, ನನಗೆ ಸಿಕ್ಕಿದೆ. ನಾನು ರವಿ ಬೋಪಣ್ಣ ಚಿತ್ರದಲ್ಲಿ, ಮೂರು ಏಜ್ ಗ್ರೂಪ್​​ ತರಹದ ಪಾತ್ರವನ್ನ ಮಾಡಿದ್ದೇನೆ ಎಂದರು. ಇನ್ನು ರವಿ ಸರ್ ಬಗ್ಗೆ ಹೇಳುವ ಹಾಗೇ ಇಲ್ಲ, ಅವ್ರನ್ನ‌ ಕ್ರೇಜಿ ಸ್ಟಾರ್ ಅಂತಾ ಸುಮ್ನೇ ಕರೆಯೋಲ್ಲ, ಅವ್ರಲ್ಲಿ ಇರುವ ಮಲ್ಟಿ ಟಾಸ್ಕಿಂಗ್ ಕ್ರಿಯೇಟಿವ್​​ನೆ​​ಸ್​ಗೆ ಅವ್ರನ್ನ ಕ್ರೇಜಿಸ್ಟಾರ್ ಅಂತಾ ಕರೆಯುತ್ತಾರೆ ಎಂದು ಹೊಗಳಿದ್ರು.

ಮಂಗಳೂರಿನ ಚೆಲುವೆ ಕಾವ್ಯ ಶೆಟ್ಟಿ

ರವಿ ಸರ್ ಸಿನಿಮಾಗಳಲ್ಲಿ ನಟಿಸಬೇಕು ಅಂದರೇ ಲಕ್ಕಿಯಾಗಿರಬೇಕು ಆ ಅದೃಷ್ಟ ನನಗೆ ಸಿಕ್ಕಿದೆ. ಈ ಚಿತ್ರದಲ್ಲಿ ಮೊದಲಿಗೆ ನನ್ನ ರೋಲ್​ ಬಹಳ ಚಿಕ್ಕದಿತ್ತು. ಬಳಿಕ ನನ್ನ‌ ಪಾತ್ರವನ್ನ ಜಾಸ್ತಿ ಮಾಡಿದರು ಅಂತಾ ಕಾವ್ಯ ಶೆಟ್ಟಿ ರವಿಮಾಮನ ಜೊತೆ ವರ್ಕ್ ಮಾಡಿದನ್ನ ಹಂಚಿಕೊಂಡರು.

ಲಂಕೆ ಸಿನಿಮಾದಲ್ಲಿ ಬೋಲ್ಡ್​ ರೋಲ್​

ಇದೇ ಮೊದಲ ಬಾರಿಗೆ ಮಲಯಾಳಂನಲ್ಲಿ, ಪೃಥ್ವಿರಾಜ್ ಜೊತೆ ಸಿನಿಮಾ ಮಾಡ್ತಾ ಇದ್ದೀನಿ. ಈ ಹಿಂದೆ ಲೂಸಿಫರ್ ಅಂತಾ ಸಿನಿಮಾ ಡೈರೆಕ್ಟ್ ಮಾಡಿದರು. ಈ ಸಿನಿಮಾದಲ್ಲಿ ನಾನು ಮೋಹನ್ ಲಾಲ್ ಜೊತೆ ಸಣ್ಣ ಪಾತ್ರ ಮಾಡಿದ್ದೀನಿ ಎಂದು ಹೇಳಿದ್ರು. ಇದರ ಜೊತೆಗೆ ಕಾವ್ಯ ಶೆಟ್ಟಿ, ಜಯ ಕಾರ್ತಿಕ್ ಜೊತೆ ಒಂದು ಸಿನಿಮಾವನ್ನ ಮಾಡ್ತಾ ಇದ್ದಾರಂತೆ.

ರವಿಚಂದ್ರನ್​ ಜೊತೆ ಕಾವ್ಯ

ಸದ್ಯ ಕನ್ನಡ ಹಾಗೂ ಮಲೆಯಾಳಂ ಭಾಷೆಯ ಸಿನಿಮಾಗಳಲ್ಲಿ, ಅಭಿನಯಿಸುತ್ತಿರುವ ಗ್ಲ್ಯಾಮರ್ ಹುಡುಗಿ ಕಾವ್ಯ ಶೆಟ್ಟಿಗೆ ಅನುಷ್ಕಾ ಶೆಟ್ಟಿ ತರ ಐತಿಹಾಸಿಕ ಸಿನಿಮಾವನ್ನ‌ ಮಾಡುವ ಕನಸು ಕಂಡಿದ್ದಾರೆ.

ನಟಿ ಕಾವ್ಯ ಶೆಟ್ಟಿ

ಇನ್ನು ಕಾವ್ಯ ಶೆಟ್ಟಿ ಫೇವರಿಟ್ ಹೀರೋ ಅಂದರೆ, ಕಿಚ್ಚ ಸುದೀಪ್ ಅಂತೆ. ಯಾಕೆಂದರೆ ಕಾವ್ಯ ಶೆಟ್ಟಿ ಸ್ಕೂಲ್ ಡೇಸ್​ನಲ್ಲಿ ಸಾಕಷ್ಟು ಬಾರಿ ಹುಚ್ಚ ಸಿನಿಮಾವನ್ನ‌ ನೋಡಿದ್ರಂತೆ. ಹೀಗಾಗಿ ಕಿಚ್ಚ ಸುದೀಪ್ ಅಂದರೆ ಕಾವ್ಯ ಶೆಟ್ಟಿಗೆ ಅಚ್ಚುಮೆಚ್ಚು. ಹೀಗಾಗಿ ಕಿಚ್ಚ ಸುದೀಪ್ ಜೊತೆ ಸ್ಕ್ರೀನ್ ಹಂಚಿಕೊಳ್ಳುವ ಕನಸನ್ನ ಕಾವ್ಯ ಶೆಟ್ಟಿ ತೆರೆದಿಟ್ಟಿದ್ದಾರೆ.

ನಟಿ ಕಾವ್ಯ ಶೆಟ್ಟಿ

ABOUT THE AUTHOR

...view details