ಅತಿ ಹೆಚ್ಚು ಪ್ರೇಕ್ಷಕರ ಮನ ಗೆದ್ದಿದ್ದ ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ತಾವು ಮದುವೆ ಆಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ಈ ಬಗ್ಗೆ ತಮ್ಮ ಹುಡುಗನ ಜೊತೆ ದುಬೈನಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆದರೆ, ಹುಡುಗನ ಹೆಸರನ್ನು ಅವರು ಎಲ್ಲಿಯೂ ಬಹಿರಂಗಪಡಿಸಿಲ್ಲ. ಪ್ರೀತಿಯ ಹುಡುಗನ ಬಗ್ಗೆ ಕಾವ್ಯ ಗೌಡ ಹೀಗೆ ಬರೆದುಕೊಂಡಿದ್ದಾರೆ.
ಹೆಲೋ, ಮೈ ಮುದ್ದು ಮಾ. ನಿನ್ನ ಜತೆ ಪ್ರಯಾಣ ಬೆಳೆಸಲು ಪ್ರತಿಯೊಂದು ಸೆಕೆಂಡ್ ನಾನು ಕಾಯುತ್ತಿದ್ದೆ. ನಿನ್ನ ಜತೆ ಕಳೆದಿದ್ದು ನನ್ನ ಜೀವನ ಅತ್ಯುತ್ತಮ ಕ್ಷಣಗಳು. ನನ್ನ ಜೀವನದಲ್ಲಿ ನಿನ್ನಂತ ಅದ್ಭುತ ವ್ಯಕ್ತಿಯನ್ನು ನಾನೆಂದೂ ಭೇಟಿ ಮಾಡಿಯೇ ಇರಲಿಲ್ಲ. ಜೀವನದಲ್ಲಿ ಉತ್ತಮವಾದದ್ದು ಸಿಗಲು ಕಾಯಬೇಕು ಎನ್ನುವ ಮಾತಿದೆ. ನನ್ನ ಜೀವನದಲ್ಲಿ ನೀನು ಸಿಕ್ಕ ನಂತರ ಆ ಕಾಯುವಿಕೆ ಕೊನೆಗೊಂಡಿದೆ. ಜಗತ್ತು ಕೊಟ್ಟ ಅತಿ ದೊಡ್ಡ ಉಡುಗೊರೆ ನೀನು ಎಂದು ಬರೆದುಕೊಂಡಿದ್ದಾರೆ.