ಈ ಸಿನಿಮಾ ಮಾಡುವುದರ ಬಗ್ಗೆ ಗಿರೀಶ್ ಕಾಸರವಳ್ಳಿ ಮತ್ತು ಜಯಪ್ರದಾ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಕತೆಯ ಅಂತಿಮ ಆಯ್ಕೆ ಇನ್ನೂ ಆಗಬೇಕಿದೆ. ಸುಪ್ರಸಿದ್ದ ನಟಿ ಜಯಪ್ರದಾ ಅವರು ಕನ್ನಡದ ಹೆಮ್ಮೆಯ ಗಿರೀಶ್ ಕಾಸರವಳ್ಳಿ ಅವರ ಸಿನಿಮಾ ಒಪ್ಪಿಕೊಳ್ಳಲು ಕಾರಣಕರ್ತರು ನಿರ್ಮಾಪಕ ಚಕ್ರಪಾಣಿ.
ಯಾರಿದು ಚಕ್ರಪಾಣಿ ಅಂದಿರ? ರೆಬೆಲ್ ಸ್ಟಾರ್ ಅಂಬರೀಶ್ ಅವರ 100 ನೇ ಸಿನಿಮಾ ‘ಹಾಂಗ್ ಕಾಂಗ್ನಲ್ಲಿ ಏಜೆಂಟ್ ಅಮರ್’ (ಜೋ ಸೈಮೊನ್ ನಿರ್ದೇಶನ 1989 ರಲ್ಲಿ ಬಿಡುಗಡೆ ಆಗಿತ್ತು) ಸಿನಿಮಾ ನಿರ್ಮಾಣ ಮಾಡಿ ಜಯ ಭೇರಿ ಹೊಡೆದವರು.ಆನಂತರ ಶಂಕರ್ ನಾಗ್ ಅಭಿನಯದ ಮಹೇಶ್ವರ (ದಿನೇಶ್ ಬಾಬು ನಿರ್ದೇಶನದಲ್ಲಿ 1990 ರಲ್ಲಿ ಬಿಡುಗಡೆ ಆಗಿತ್ತು) ಸಿನಿಮಾದ ನಿರ್ಮಾಪಕರು. ಇವರು ಕಳೆದ ಎರಡುವರೆ ದಶಕಗಳಿಂದ ಸುಮ್ಮನಾಗಿ ಬಿಟ್ಟಿದ್ದಾರೆ. ಈಗ ಚಕ್ರಪಾಣಿ ಅವರು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಂಘದ ಅಧ್ಯಕ್ಷ. ತಾವಾಯಿತು ತಮ್ಮ ಪಾಡಾಯಿತು ಎಂದು ಸದಾಶಿವನಗರದಲ್ಲಿ ನೆಲೆಸಿದ್ದಾರೆ. ಈಗಿನ ಸ್ಟಾರ್ ಪದ್ದತಿ ನಮ್ಮಂತಹವರಿಗೆ ಆಗಿ ಬರೊಲ್ಲ ಅಂತಲೇ ಹೇಳಿ ಕೊಳ್ಳುವ ಚಕ್ರಪಾಣಿ, ಗಿರೀಶ್ ಕಾಸರವಳ್ಳಿ ಹಾಗೂ ಡಾ ಜಯಪ್ರದಾ ಗ್ರೀನ್ ಸಿಗ್ನಲ್ ತೋರಿದಾಗ ಸಿನಿಮಾ ಶುರು ಮಾಡಲು ಸಿದ್ದವಾಗಿದ್ದಾರೆ.