ಹೊಸಪೇಟೆ(ಬಳ್ಳಾರಿ): ಲಾಕ್ಡೌನ್ ಘೋಷಣೆಯಾದ ವೇಳೆ ಹಂಪಿ ಬಳಿಯ ಪ್ರವಾಸಿ ಮಂದಿರದಲ್ಲೇ ಉಳಿದುಕೊಂಡಿದ್ದ ಸ್ಯಾಂಡಲ್ವುಡ್ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಹಾಗೂ ಪುತ್ರ ಕೃಷ್ಣಕುಮಾರ್ ಇದೀಗ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಹಂಪಿ ಪ್ರವಾಸಿ ಮಂದಿರದಲ್ಲಿ ಸಿಲುಕಿದ್ದ ನಟಿ ಜಯಂತಿ, ಪುತ್ರ ಕೃಷ್ಣಕುಮಾರ್ ಬೆಂಗಳೂರಿನತ್ತ ಪ್ರಯಾಣ - ಹೋಟೆಲ್ನಲ್ಲಿದ್ದ ಹಿರಿಯ ನಟಿ ಜಯಂತಿ ಬೆಂಗಳೂರಿನತ್ತ ಪಯಣ
ಜಯಂತಿ ಪುತ್ರ ಕೃಷ್ಣಕುಮಾರ್ ಹಂಪಿ ಬೈ ನೈಟ್ ಜವಾಬ್ದಾರಿ ಹೊತ್ತಿದ್ದರು. ಜೊತೆಗೆ ಜಯಂತಿ ಹುಟ್ಟೂರು ಬಳ್ಳಾರಿ ಆದ್ದರಿಂದ ಜಯಂತಿ ಕೂಡಾ ಪುತ್ರನೊಂದಿಗೆ ಬಳ್ಳಾರಿಗೆ ತೆರಳಿದ್ದರು. ಈಗ ಜಿಲ್ಲಾಡಳಿತ ಅವರಿಗೆ ಬೆಂಗಳೂರಿಗೆ ಹೋಗಲು ಅನುಮತಿ ನೀಡಿರುವ ಕಾರಣ ಜಯಂತಿ ಹಾಗೂ ಪುತ್ರ ಕೃಷ್ಣಕುಮಾರ್ ಬೆಂಗಳೂರಿಗೆ ಹೊರಟಿದ್ದಾರೆ.
ಲಾಕ್ಡೌನ್ಗೂ ಮುನ್ನ ಜಯಂತಿ ತಮ್ಮ ಪುತ್ರನೊಂದಿಗೆ ಹಂಪಿಗೆ ತೆರಳಿದ್ದರು. ಆದರೆ ವಾಪಸ್ ಬರುವಷ್ಟರಲ್ಲಿ ಲಾಕ್ಡೌನ್ ಘೊಷಣೆಯಾದ ಕಾರಣ ಈ ಸಮಯದಲ್ಲಿ ಪ್ರಯಾಣಿಸುವುದು ಸೂಕ್ತವಲ್ಲ ಎಂದು ಅರಿತ ಇಬ್ಬರೂ ಹಂಪಿ ಬಳಿಯ ಕಮಲಾಪುರದ ಪ್ರವಾಸಿ ಮಂದಿರದಲ್ಲೇ ಉಳಿದುಕೊಳ್ಳುವ ಮೂಲಕ ಲಾಕ್ಡೌನ್ಗೆ ಸಹಕರಿಸಿದ್ದರು. ಆದರೆ ಇದೀಗ ಜಿಲ್ಲಾಡಳಿತ ಅವರಿಗೆ ಬೆಂಗಳೂರಿಗೆ ಹೋಗಲು ಅನುಮತಿ ನೀಡಿರುವ ಕಾರಣ ಜಯಂತಿ ಹಾಗೂ ಪುತ್ರ ಕೃಷ್ಣಕುಮಾರ್ ಬೆಂಗಳೂರಿಗೆ ಹೊರಟಿದ್ದಾರೆ.
ಜಯಂತಿ ಪುತ್ರ ಕೃಷ್ಣಕುಮಾರ್ ಹಂಪಿ ಬೈ ನೈಟ್ ಜವಾಬ್ದಾರಿ ಹೊತ್ತಿದ್ದರು. ಜೊತೆಗೆ ಜಯಂತಿ ಹುಟ್ಟೂರು ಬಳ್ಳಾರಿ ಆದ್ದರಿಂದ ಜಯಂತಿ ಕೂಡಾ ಪುತ್ರನೊಂದಿಗೆ ಬಳ್ಳಾರಿಗೆ ತೆರಳಿದ್ದರು. ಆದರೆ ಆ ವೇಳೆಗೆ ಲಾಕ್ಡೌನ್ ಘೋಷಣೆಯಾದ ಕಾರಣ ಸುಮಾರು ಒಂದು ತಿಂಗಳ ಕಾಲ ಕಮಲಾಪುರದ ಪ್ರವಾಸೋದ್ಯಮ ನಿಗಮದ ಮಯೂರ ಭುವನೇಶ್ವರಿ ಹೋಟೆಲ್‌ನಲ್ಲಿ ಉಳಿದಿದ್ದರು. ಇದೀಗ ಜಿಲ್ಲಾಡಳಿತ ಅನುಮತಿ ನೀಡಿರುವ ಹಿನ್ನೆಲೆ ಸಿಲಿಕಾನ್ ಸಿಟಿಯತ್ತ ಪ್ರಯಾಣ ಬೆಳೆಸಿದ್ದಾರೆ.